ತಿರುಮಲ: ವಿಶ್ವಖ್ಯಾತ ಆಂಧ್ರಪ್ರದೇಶದ ಪುಣ್ಯಕ್ಷೇತ್ರ ತಿರುಪತಿಯಲ್ಲಿ (Tirupati) ಶನಿವಾರ ಭದ್ರತಾ ಲೋಪವಾಗಿದೆ. ತಿರುಮಲದ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ದೇವಸ್ಥಾನದ ಗೋಪುರವೇರಿದ್ದಾನೆ.
A major security breach was reported at the Sri Govindaswamy Temple in #Tirupati after a man, believed to be intoxicated, trespassed into the premises and climbed onto the Gopuram. He reportedly tried to disturb the temple kalashas, triggering alarm among devotees and staff.… pic.twitter.com/YgBbjvxJxr
— Hyderabad DNA (@HyderabadDna) January 3, 2026
ಆತನನ್ನು ಇಳಿಸಲು ಯತ್ನಿಸಿದಾಗ ಆತ ಮದ್ಯದ ಬಾಟಲಿಗೆ ಬೇಡಿಕೆ ಇಟ್ಟಿದ್ದಾನೆ. ಮದ್ಯವ್ಯಸನಿಯನ್ನು ತೆಲಂಗಾ ಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮವಾ ಡದಲ್ಲಿರುವ ಪೆದ್ದಮಲ್ಲ ರೆಡ್ಡಿ ಕಾಲೋನಿಯ ನಿವಾಸಿ 45 ವರ್ಷದ ಕುಟ್ಟಡಿ ತಿರುಪತಿ ಎಂದು ಗುರುತಿಸಲಾಗಿದೆ.
ಕುಟ್ಟಡಿ ದೇವಾಲಯದ ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಬೀಳದಂತೆ ದೇಗುಲ ಗೋಡೆ ಏರಿ ಗೋಪುರದಲ್ಲಿ ಕುಳಿತಿದ್ದಾನೆ. ಅಷ್ಟೇ ಅಲ್ಲದೇ, ದೇವಾಲಯದ ಗೋಪುರ ಹತ್ತಿ ಕಲಶ ಮುಟ್ಟಿದ್ದಾನೆ. ಆ ಬಳಿಕ ಜಾಗೃತರಾದ ಸಿಬ್ಬಂದಿ ಕುಟ್ಟಡಿಯನ್ನು ಕೆಳಗೆ ಕರೆತರಲು ಇನ್ನಿಲ್ಲದ ಶ್ರಮ ಹಾಕಬೇಕಾಗಿ ಬಂದಿದೆ.
ಕುಟ್ಟಡಿ ಬಾಟಲ್ ಮದ್ಯ ಕೊಡಿ, ಆ ಬಳಿಕವಷ್ಟೇ ಕೆಳಕ್ಕೆ ಇಲಿದುಬರುತ್ತೇನೆ ಎಂದು ಷರತ್ತು ವಿಧಿಸಿದ್ದಾನೆ. ವಿಧಿಯಿಲ್ಲದೇ ಮದ್ಯದ ಬಾಟಲಿ ತಂದು ಕೊಟ್ಟು ಆತನನ್ನು ಗೋಪುರದ ಮೇಲಿನಿಂದ ಕೆಳಕ್ಕೆ ಬರುವಂತೆ ಮಾಡಲಾಗಿದೆ.
ಬಿಗಿ ಭದ್ರತೆ ಇದ್ದರೂ, ಒಳನುಗ್ಗಿದ ವ್ಯಕ್ತಿ ಹಲವಾರು ಗಂಟೆಗಳ ಕಾಲ ಗಮನಿಸದೆ ಉಳಿದಿದ್ದು ಅಚ್ಚರಿಗೆ ಕಾರಣವಾಗಿದೆ. ಬಳಿಕ ತಿರುಪತಿಯ ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ತಿರುಪತಿ ಪೂರ್ವ ಡಿವೈಎಸ್‌ಪಿ ಎಂ.ಭಕ್ತವತ್ಸಲಂ ನಾಯ್ಡು ಮಾಹಿತಿ ನೀಡಿದ್ದಾರೆ.