Global leaders united in 'Geetam'..!

ದೊಡ್ಡಬಳ್ಳಾಪುರ: ʼಗೀತಂʼನಲ್ಲಿ ಒಂದುಗೂಡಿದ ಜಾಗತಿಕ ನಾಯಕರು..!

ದೊಡ್ಡಬಳ್ಳಾಪುರ: ತಾಲೂಕಿನ ಪ್ರಮುಖ ಶಿಕ್ಷಣ ಸಂಸ್ಥೆ ʼಗೀತಂʼ ( Geetam ವಿಶ್ವವಿದ್ಯಾಲಯ ಎಂದು ಪರಿಭಾವಿಸಲ್ಪಟ್ಟಿದೆ), 13ನೆಯ ʼಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಪರಿವರ್ತನೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನʼವನ್ನು ತನ್ನ ಕ್ಯಾಂಪಸ್‌ನಲ್ಲಿ ಆಯೋಜಿಸಿತ್ತು.

ಈ ಮೂಲಕ ವ್ಯಾಪಕ ಪರಿಣಾಮ ಉಂಟುಮಾಡುವಂತಹ ಸಂವಾದಗಳು ಹಾಗೂ ಜಾಗತಿಕ ಭಾಗೀದಾರಿಕೆಯನ್ನು ಸಾಧ್ಯವಾಗಿಸಿತು.

ಈ ಕಾರ್ಯಕ್ರಮವನ್ನು ಐಯುಸಿಇಇ ಫೌಂಡೇಷನ್‌ (ದಿ ಇಂಡೊ ಯೂನಿವರ್ಸಲ್‌ ಕೊಲಾಬರೇಷನ್‌ ಫಾರ್‌ ಎಂಜಿನಿಯರಿಂಗ್‌ ಎಜುಕೇಷನ್)‌ ಜೊತೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.

ʼಎ.ಐ. ಜಗತ್ತಿನಲ್ಲಿ ಬೋಧನೆ ಮತ್ತು ಕಲಿಕಾ ವ್ಯವಸ್ಥೆಯಲ್ಲಿ ಪರಿವರ್ತನೆ ತರುವುದುʼ ಈ ಕಾರ್ಯಕ್ರಮದ ಮುಖ್ಯ ವಿಷಯವಾಗಿತ್ತು. ಇದು ಜಗತ್ತಿನಾದ್ಯಂತ ಎಂಜಿನಿಯರಿಂಗ್‌ ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಹಾಗೂ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಹೊಸ ಪಠ್ಯಕ್ರಮ ಮಾದರಿಗಳನ್ನು, ಸಂಶೋಧನೆಗಳನ್ನು ಕಂಡುಕೊಳ್ಳಲು ಶಿಕ್ಷಣ ತಜ್ಞರನ್ನು, ಕೈಗಾರಿಕಾ ನಾಯಕರನ್ನು ಒಂದೆಡೆ ತಂದಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಾಧಿಪತಿ (ವಿ.ಸಿ) ಡಾ.ಎಸ್.‌ ವಿದ್ಯಾಶಂಕರ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್‌ ಡಾ. ಅಶೋಕ ಎಸ್. ಶೆಟ್ಟರ್, ಬೆಂಗಳೂರಿನ ʼಗೀತಂʼ ವಿಶ್ವವಿದ್ಯಾಲಯದ ಹಾಗೂ ಕಾರ್ಯಕ್ರಮದ ಸರ್ವಾಧ್ಯಕ್ಷ ಪ್ರೊ ವೈಸ್‌ ಚಾನ್ಸಲರ್‌ ಪ್ರೊ. ಬಸವರಾಜ ಗುಂಡಪ್ಪ ಕೆ., ಪ್ರಮುಖ ಗಣ್ಯರು, ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಕೂಡ ಕಾರ್ಯಕ್ರಮದಲ್ಲಿ ಇದ್ದರು.

ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಪರಿವರ್ತನೆ ತರಬೇಕಿರುವುದು ಈಗ ಒಂದು ಆಯ್ಕೆಯಷ್ಟೇ ಆಗಿ ಉಳಿದಿಲ್ಲ; ಅದೊಂದು ಅನಿವಾರ್ಯ ಆಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ವಿದ್ಯಾಶಂಕರ್‌ ಒತ್ತಿ ಹೇಳಿದರು.

ಭಾರತದ ಎಂಜಿನಿಯರಿಂಗ್‌ ಪದವೀಧರರು ಜಾಗತಿಕ ಮಟ್ಟದ ವೇದಿಕೆಗಳಲ್ಲಿ ನಾಯಕತ್ವದ ಸ್ಥಾನದಲ್ಲಿ ಮುಂದುವರಿಯುವಂತೆ ಆಗಲು ಶಿಕ್ಷಣ ಸಂಸ್ಥೆಗಳು ಹೇಗೆ ಒಂದಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಅವರು ತಿಳಿಸಿದರು. ಜಾಗತಿಕ ಮಟ್ಟದಲ್ಲಿನ ಅತ್ಯುತ್ತಮ ಕ್ರಮಗಳ ಬಗ್ಗೆ ಅವರು ವಿವರಿಸಿದರು.

ಇದೇ ಧಾಟಿಯಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್‌ ಡಾ. ಅಶೋಕ ಎಸ್.‌ ಶೆಟ್ಟರ್‌ ಅವರು, ತರಗತಿ ಕೊಠಡಿಗಳು ಮಾಹಿತಿಯ ಕೇಂದ್ರಗಳಾಗಿ ಮಾತ್ರವೇ ಉಳಿಯಬಾರದು, ಅವು ಅನ್ವೇಷಣೆಯ ಪ್ರಯೋಗಾಲಯಗಳೂ ಆಗಬೇಕು ಎಂದು ಆಶಿಸಿದರು. ಬದಲಾಗುವ ಸನ್ನಿವೇಶಗಳಿಗೆ ಒಗ್ಗಿಕೊಳ್ಳುವ ನಾಯಕರನ್ನು ಎ.ಐ. ಜಗತ್ತು ಬಯಸುತ್ತಿದೆ. ಇಂತಹ ನಾಯಕರನ್ನು ಸಿದ್ಧಪಡಿಸುವ ಬಹುಶಿಸ್ತೀಯ ಪಾಲುದಾರಿಕೆಯ ಮಹತ್ವದ ಬಗ್ಗೆ ಅವರು ಹೇಳಿದರು.

ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ತಿಳಿಸಿದ ʼಗೀತಂʼ ವಿಶ್ವವಿದ್ಯಾಲಯದ ಪ್ರೊ ವೈಸ್‌ ಚಾನ್ಸಲರ್‌ ಹಾಗೂ ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಪ್ರೊ. ಬಸವರಾಜ ಗುಂಡಪ್ಪ ಕೆ. ಅವರು “ನಮ್ಮ ಗುರಿ ಇರುವುದು ಎ.ಐ ಬಗ್ಗೆ ಮಾತನಾಡುವುದಷ್ಟೇ ಅಲ್ಲ; ಬದಲಿಗೆ, ಕಲಿಕಾ ಪ್ರಕ್ರಿಯೆಯ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಇರಿಸಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ನಮ್ಮ ಗುರಿ. ಐಸಿಟಿಐಇಇ 2026 ಕಾರ್ಯಕ್ರಮದಲ್ಲಿ ರೂಪಿಸಿದ ನೀಲನಕ್ಷೆಯು ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಹೆಚ್ಚು ಕ್ರಿಯಾಶೀಲವಾದ, ಮಾನವ ಕೇಂದ್ರಿತವಾದ ಮಾರ್ಗವೊಂದಕ್ಕೆ ಅಡಿಪಾಯದಂತೆ ಕೆಲಸ ಮಾಡುತ್ತದೆ ಎಂದು ನಾನು ಆಶಿಸುತ್ತೇನೆ” ಎಂದರು.

ಐಸಿಟಿಐಇಇ 2026ರಲ್ಲಿ ನಡೆದ ದಿಕ್ಸೂಚಿ ಗೋಷ್ಠಿಗಳು ಸಾಂಪ್ರದಾಯಿಕ ಅಕಾಡೆಮಿಕ್ ಚರ್ಚೆಗಳ ಪರಿಧಿಯನ್ನು ವಿಸ್ತರಿಸಿದವು. ಅವು ಬಹಳ ತೀವ್ರವಾದ ಚರ್ಚೆಗಳಿಗೆ, ಸಂವಾದಗಳಿಗೆ ದಾರಿ ಮಾಡಿಕೊಟ್ಟವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಜ್ಞರು ʼಎ.ಐ. ಬೋಧಕ ಸಿಬ್ಬಂದಿ ಮೊಗಸಾಲೆʼಯಲ್ಲಿ ತಲಸ್ಪರ್ಶಿ ಅವಲೋಕನ ನಡೆಸಿದರು. ಬಾಟ್‌ಗಳು ಬೋಧಕರಿಗೆ ನೆರವಾಗುವಂತಹ ಬದಲಾವಣೆಗಳು ತರಗತಿಗಳಲ್ಲಿ ಆಗುತ್ತಿರುವ ಬಗ್ಗೆ ಮಾತನಾಡಿದರು. ಎಂಜಿನಿಯರಿಂಗ್‌ ಪಠ್ಯಕ್ರಮವನ್ನು ವಿನೋದಮಯವಾದ ಆಟದ ರೂಪಕ್ಕೆ ಪರಿವರ್ತಿಸುವ ಬಗ್ಗೆ ಕೆಲವು ಗೋಷ್ಠಿಗಳು ಗಮನ ಹರಿಸಿದವು.

ಇಡೀ ಕಾರ್ಯಕ್ರಮದ ಮೂಲಕ ಒಂದು ಸಂದೇಶ ರವಾನೆ ಆಯಿತು: ಶಿಕ್ಷಣವನ್ನು ಜೀವಂತ ವ್ಯವಸ್ಥೆ ಎಂಬಂತೆ ಕಾಣಬೇಕು ಎಂಬುದು ಆ ಸಂದೇಶ. ಎ.ಐ. ತಂತ್ರಜ್ಞಾನವನ್ನು ಶಿಕ್ಷಕರಿಗೆ ಪರ್ಯಾಯ ಎಂಬಂತೆ ಕಾಣಬಾರದು, ಬಹಳ ವೇಗವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅದನ್ನು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಸಾಧನವನ್ನಾಗಿ ಕಾಣಬೇಕು ಎಂದು ಭಾಷಣಕಾರರು ಹೇಳಿದರು.

“ನಮ್ಮ ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಕಾಯುತ್ತ ಕುಳಿತಿಲ್ಲ. ಅವರು ಭವಿಷ್ಯವನ್ನು ನಿರ್ಮಿಸುತ್ತಿದ್ದಾರೆ. ಯುವಕರ ಸಹಾನುಭೂತಿಯನ್ನು ಎ.ಐ.ನ ವೇಗದ ಜೊತೆ ಬೆಸೆದಾಗ ಮಾಯಾಲೋಕದಲ್ಲಿ ಆಗುವಂಥದ್ದು ಆಗುತ್ತದೆ ಎಂಬುದನ್ನು ಈ ವರ್ಷದ ವೇದಿಕೆಯು ಸಾಬೀತು ಮಾಡಿದೆ. ಎಂಜಿನಿಯರ್‌ ಆಗುವುದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಾವು ಅವರಿಗೆ ಕಲಿಸುತ್ತಿದ್ದೇವೆ. ಸವಾಲುಗಳು ವಾಸ್ತವದಲ್ಲಿ ಬರುವುದಕ್ಕೆ ಮೊದಲೇ ಅದರ ಅಂದಾಜು ಮಾಡುವ ದೂರದೃಷ್ಟಿ ಹೊಂದುವಂತೆ ನಾವು ಅವರಿಗೆ ಪಾಠ ಮಾಡುತ್ತಿದ್ದೇವೆ” ಎಂದು ಐಯುಸಿಇಇ ಫೌಂಡೇಷನ್‌ನ ಕೃಷ್ಣ ವೇದುಲ ಹೇಳಿದರು.

ಬಹಳ ಮಹತ್ವಾಕಾಂಕ್ಷೆಯ ವಿಷಯವನ್ನು ಕಾರ್ಯಕ್ರಮ ಹೊಂದಿತ್ತು. ಇದರ ಹಿನ್ನೆಲೆಯಲ್ಲಿ ಬೇರೆ ಬೇರೆ ವಿಶ್ವವಿದ್ಯಾಲಯಗಳ ನಾಯಕರು ʼಕೃತಕ ಬುದ್ಧಿಮತ್ತೆಯು ಮುನ್ನೆಲೆಗೆ ಬರುತ್ತಿರುವ ಹೊತ್ತಿನಲ್ಲಿ ಬದಲಾವಣೆಗೆ ನಾಯಕತ್ವ ಒದಗಿಸುವುದುʼ ಎಂಬ ಗೋಷ್ಠಿಯ ಕೇಂದ್ರ ಸ್ಥಾನದಲ್ಲಿದ್ದರು.

ಶಿಕ್ಷಣ ಸಂಸ್ಥೆಗಳಲ್ಲಿ ಮಹತ್ವದ ಪರಿವರ್ತನೆ ತರಬೇಕಿರುವ ಸಂದರ್ಭದಲ್ಲಿ ಅಕಾಡೆಮಿಕ್‌ ನಾಯಕರು ಹೊರಬೇಕಾದ ತುರ್ತು ಜವಾಬ್ದಾರಿಯ ಬಗ್ಗೆ ಇದು ವಿವಿಧ ಆಯಾಮಗಳಲ್ಲಿ ಅವಲೋಕನ ನಡೆಸಿತು. ಶಿಕ್ಷಣದ ಔನ್ನತ್ಯವನ್ನು ಹೇಳುವುದು ಮನುಷ್ಯನ ಕೆಲಸಗಳು. ಮನುಷ್ಯನ ಇರುವಿಕೆಯನ್ನು ಕಳೆದುಕೊಳ್ಳದೆಯೇ ಎ.ಐ. ಜೊತೆಗಿನ ಪರಿವರ್ತನೆಯ ಕಾಲಘಟ್ಟದಲ್ಲಿ ವ್ಯವಸ್ಥೆಯನ್ನು ಮುನ್ನಡೆಸುವುದು ಹೇಗೆ ಎಂಬ ಬಗ್ಗೆ ಗೋಷ್ಠಿಯು ಗಮನ ನೀಡಿತು.

ಕಾರ್ಯಕ್ರಮದಲ್ಲಿ ಬೋಧಕ ಸಿಬ್ಬಂದಿಯು 76 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಇವು ಜಿಇಇಟಿ ನಿಯತಕಾಲಿಕೆಯಲ್ಲಿ ಪ್ರಕಟವಾಗಲಿವೆ.

ಸಂಶೋಧನಾ ಪ್ರಬಂಧಗಳ ವಿಷಯಗಳು ಹೀಗಿದ್ದವು

  • ಸಕ್ರಿಯ ಕಲಿಕೆ ಮತ್ತು ಹೊಸಬಗೆಯ ಪಠ್ಯಕ್ರಮ.
  • ಸಂಶೋಧನೆಯ ಆಧಾರದಲ್ಲಿ ಮಾಹಿತಿ ಪಡೆದ ಪಠ್ಯಕ್ರಮ ಮತ್ತು ಕೋರ್ಸ್‌ನ ವಿನ್ಯಾಸ.
  • ಮೌಲ್ಯಮಾಪನ, ಸಲಹೆ ಮತ್ತು ಕಲಿಕಾ ಪರಿಣಾಮ.
  • ಬೋಧಕ ಸಿಬ್ಬಂದಿಯನ್ನು ಬೆಳೆಸುವುದು ಮತ್ತು ಶೈಕ್ಷಣಿಕ ನಾಯಕತ್ವ.
  • ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು ಹಾಗೂ ಭವಿಷ್ಯದ ಕೌಶಲಗಳು.

ಈ ಕಾರ್ಯಕ್ರಮದ ಜೊತೆಯಲ್ಲೇ ʼದಿ ಇಂಡೊ ಯೂನಿವರ್ಸಲ್‌ ಕೊಲಾಬರೇಷನ್‌ ಫಾರ್‌ ಎಂಜಿನಿಯರಿಂಗ್‌ ಎಜುಕೇಷನ್‌ ಫೌಂಡೇಷನ್‌ (ಐಯುಸಿಇಇ) ಕೂಡ ತನ್ನ ವಾರ್ಷಿಕ ವಿದ್ಯಾರ್ಥಿ ಸಮಾವೇಶವನ್ನು ʼಗೀತಂʼನ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಆಯೋಜಿಸಿತು. ಇದು ವಿದ್ಯಾರ್ಥಿಗಳಿಗೆ ಪಾಲುದಾರಿಕೆ, ಆವಿಷ್ಕಾರ ಮತ್ತು ನಾಯಕತ್ವದ ಪ್ರದರ್ಶನಕ್ಕೆ ವೇದಿಕೆ ಒದಗಿಸಲಿದೆ.

ರಾಜಕೀಯ

ರಾಜಘಟ್ಟದಲ್ಲಿ ಬೀದಿಗೆ ಬಂದ ಜೆಡಿಎಸ್ ಮುಖಂಡರ ಒಳಜಗಳ..!

ರಾಜಘಟ್ಟದಲ್ಲಿ ಬೀದಿಗೆ ಬಂದ ಜೆಡಿಎಸ್ ಮುಖಂಡರ ಒಳಜಗಳ..!

ಜೆಡಿಎಸ್ (JDS) ಮುಖಂಡರ ಒಳಜಗಳ ರಾಜಘಟ್ಟ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಅರಳಿಕಟ್ಟೆಯಲ್ಲಿ ಬೀದಿಗೆ ಬಂದಿದೆ.

[ccc_my_favorite_select_button post_id="118288"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ದೊಡ್ಡಬಳ್ಳಾಪುರ: ಕಿಡಿಗೇಡಿಗಳ ಹಾವಳಿ.. ಕಾರಿನ ಗಾಜು ಪುಡಿಪುಡಿ..!

ದೊಡ್ಡಬಳ್ಳಾಪುರ: ಕಿಡಿಗೇಡಿಗಳ ಹಾವಳಿ.. ಕಾರಿನ ಗಾಜು ಪುಡಿಪುಡಿ..!

ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಹೊಡೆಯುವ ಮೂಲಕ ಕಿಡಿಗೇಡಿಗಳು ಉಪಟಳ (Miscreant's annoyance) ಮೆರೆದಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಆರೂಢಿ ಗ್ರಾಮದಲ್ಲಿ ನಡೆ

[ccc_my_favorite_select_button post_id="118236"]
ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಮಹಿಳೆಗೆ ತೀವ್ರ ಗಾಯ

ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಮಹಿಳೆಗೆ ತೀವ್ರ ಗಾಯ

ಇತ್ತೀಚೆಗಷ್ಟೇ ಜೆಸಿಬಿಗೆ (JCB) ಕಾರು (Car) ಡಿಕ್ಕಿ ಹೊಡೆದಿದ್ದ ಘಟನೆ ಮಾಸುವ ಮುನ್ನವೇ, ಅದೇ ಸ್ಥಳದಲ್ಲಿ ಕಾರು ಮಹಿಳೆಗೆ ಡಿಕ್ಕಿ ಹೊಡೆದು (Accident) ಪರಾರಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಮೆಣಸಿ ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="118137"]

ಆರೋಗ್ಯ

ಸಿನಿಮಾ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕ ಪ್ರಕಾಶ್ ರಾಜ್ (Prakash Raj) ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ.

[ccc_my_favorite_select_button post_id="117722"]
error: Content is protected !!