ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ (Hindu) ನರಮೇಧ ಮುಂದುವರೆದಿದ್ದು, ಸಾನಮ್ ಗಂಜ್ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ವರದಿಗಳ ಪ್ರಕಾರ, ದೆರಾಯ್ ಉಪಜಿಲ್ಲಾ ವ್ಯಾಪ್ತಿಯಲ್ಲಿ 19ವರ್ಷದ ಮೋಹಪಾತ್ರ ಎಂಬ ಯುವಕನಿಗೆ ದುಷ್ಕರ್ಮಿಗಳು ಥಳಿಸಿ, ಹಣ ನೀಡುವಂತೆ ಹಿಂಸೆ ಕೊಟ್ಟಿದ್ದಾರೆ. ಮೋಹಪಾತ್ರ ಹಣ ಕೊಡಲು ನಿರಾಕರಿಸಿದ್ದಕ್ಕೆ ವಿಷ ಕುಡಿಸಿ ಹತ್ಯೆಮಾಡಿದ್ದಾರೆ ಎಂದು ವರದಿಯಾಗಿದೆ.
-Another #Hindu Man #Killed In #Bangladesh, Was Thrashed, Poisoned.
— MAVERICK 🇮🇳 (@valvimangal08) January 10, 2026
-Under the Islamic regime of #Muhammad_Yunus, the Hindu community in Bangladesh is being continuously targeted. pic.twitter.com/e8eWiApMaF
ಮೋಹಪಾತ ಸಹೋದರ ಆಯನ್ ದಾಸ್ ಹೇಳುವಂತೆ, ಮೋಹಪಾತ್ರ ಅಮಿರುಲ್ ಇಸ್ಲಾಂ ಎಂಬುವವರ ಅಂಗಡಿಯಲ್ಲಿ 5,500 ಟಾಕಾಗೆ(4.060 ರು.) ಮೊಬೈಲ್ ಪಾವತಿಸಿ ಇನ್ನುಳಿದ ಹಣವನ್ನು ವಾರಕ್ಕೆ 500 (360 ರು) ಟಾಕಾಗಳಂತೆ ಪಾವತಿಸುವದಾಗಿ ತಿಳಿಸಿದ್ದನಂತೆ, ಆದರೆ ಕೊನೆಯ ಕಂತು ಪಾವತಿಸುವುದು ಸ್ವಲ್ಪ ತಡವಾಗಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡು ಭಾರತದಲ್ಲಿ ಆಶ್ರಯ ಪಡೆದ ಬಳಿಕ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಈ ವರೆಗೆ 8 ಮಂದಿಯ ಹತ್ಯೆಯಾಗಿದೆ.
ಕಳೆದ ಒಂದು ತಿಂಗಳಿಂದ ಧರ್ಮನಿಂದನೆ ಆರೋಪದಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್‌ನನ್ನು ಬಡಿದು, ಮರಕ್ಕೆ ಕಟ್ಟಿ ಬೆಂಕಿಯಿಟ್ಟು ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದರು. ಅಲ್ಲದೆ ಹಿಂದೂ ವಿಧವೆಯ ಮೇಲೆ ದೌರ್ಜನ್ಯ, ಅತ್ಯಾಚಾರ ವರದಿಯಾಗಿದೆ.
While the world is busy watching development in Iran and the Greenland, the Islamists in Bangladesh is continuing with their killing of Hindus minority population.
— Nikhilesh Verma (@csnikhil) January 10, 2026
Another Hindu Man Killed In Bangladesh, Was Thrashed, Poisoned https://t.co/DJM4whDM0E
ಆದರೇ ಶೇಕ್ ಹಸೀನಾಗೆ ಆಶ್ರಯ ನೀಡಿರುವ ಮೋದಿ ಸರ್ಕಾರ, ಕೇವಲ ಆಕ್ಷೇಪ, ಖಂಡನೆಗೆ ಸೀಮಿತವಾಗಿದೆಯೇ ಹೊರತು, ಬಾಂಗ್ಲಾದೇಶದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಹಿಂದೂಗಳ ರಕ್ಷಣೆಗೆ ವಿದೇಶಾಂಗ ಇಲಾಖೆ ಮಟ್ಟದಲ್ಲಿ ಯಾವುದೇ ಒತ್ತಡದ ಕ್ರಮಕೈಗೊಳ್ಳದೆ ಉಳಿದಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.