ಬೆಂಗಳೂರು: ಬಿಗ್ ಬಾಸ್ (Bigg Boss 12) ಕನ್ನಡ ಸೀಸನ್ 12 ಫಿನಾಲೆ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದು, ನಿರೂಪಕ ಕಿಚ್ಚ ಸುದೀಪ್ ಅವರ ವಿರುದ್ದವೇ ವೀಕ್ಷಕರು ಕೆರಳಿದ್ದಾರೆ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada 12) ಈಗ ಫಿನಾಲೆ ಹಂತಕ್ಕೆ ಕಾಲಿಟ್ಟಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಕುತೂಹಲ ಕೆರಳಿಸಿದೆ. ಆದರೆ ಫಿನಾಲೆಗೂ ಮುನ್ನವೇ ವೀಕ್ಷಕರ ನಡುವೆ ಭಾರೀ ಚರ್ಚೆ, ಆಕ್ರೋಶ ಮತ್ತು ವಿವಾದ ಹುಟ್ಟಿಕೊಂಡಿದೆ.
ಕಾರಣ ಇಡೀ ಸೀಸನ್ ಎಂಟರ್‌ಟೈನ್‌ಮೆಂಟ್ ಕಿಂಗ್ ಅಂತ ಕರೆಸಿಕೊಂಡಿದ್ದ ಗಿಲ್ಲಿ ನಟನಿಗೆ (Gilli Nata) ಈ ಸೀಸನ್‌ನ ‘ಕಿಚ್ಚನ ಚಪ್ಪಾಳೆ’ ಸಿಗದೇ ಇರುವುದು.
ಗಿಲ್ಲಿ ನಟ ಪ್ರತಿ ಎಪಿಸೋಡ್‌ನಲ್ಲೂ ಕಾಮಿಡಿ, ಎಂಟರ್‌ಟೈನ್‌ಮೆಂಟ್ ಮೂಲಕ ವೀಕ್ಷಕರನ್ನು ರಂಜಿಸಿದ್ದರು. ಈ ಸೀಸನ್‌ನ ‘ಒನ್ ಮ್ಯಾನ್ ಶೋ, ಮಾಸ್ಟರ್‌ಮೈಂಡ್, ಕಾಮಿಡಿ ಕಿಂಗ್ ಎಂದು ವೀಕ್ಷಕರು ಗಿಲ್ಲಿ ಬಗ್ಗೆ ಖುಷಿ ವ್ಯಕ್ತಪಡಿಸುತ್ತಿದ್ದು, ಈ ಬಾರಿ ಹೊಸದಾಗಿ ಆರಂಭವಾಗಿರುವ ಇಡೀ ಸೀಸನ್‌ನ ‘ಕಿಚ್ಚನ ಚಪ್ಪಾಳೆ’ ಗಿಲ್ಲಿ ನಟನಿಗೆ ಬರುತ್ತೆ ಎಂದುಕೊಂಡಿದ್ದರು. ಆದರೆ ಗಿಲ್ಲಿ ಅಭಿಮಾನಿಗಳಿಗೆ ಮಾತ್ರವಲ್ಲ ಸಂಪೂರ್ಣ ಬಿಗ್ ಬಾಸ್ ಅಭಿಮಾನಿಗಳಿಗೆ ಈ ವೀಕೆಂಡ್ ನಿರಾಸೆ ಮೂಡಿದೆ.
ಈ ಬಾರಿಯ ಸೀಸನ್‌ನ ‘ಕಿಚ್ಚನ ಚಪ್ಪಾಳೆ’ ಗಿಲ್ಲಿ ನಟ ಬದಲಾಗಿ ಧ್ರುವಂತ್‌ಗೆ ದೊರೆತಿದೆ. ಇದರಿಂದ ಗಿಲ್ಲಿ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಾಹಿನಿ ಹಾಗೂ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ನೇರವಾಗಿ ಬೇಸರ ವ್ಯಕ್ತಪಡಿಸಿದ್ದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಉಂಟಾದ ಆಕ್ರೋಶಕ್ಕೆ ಬಿಗ್ ಬಾಸ್ ಮಣಿದಿದ್ದು, ಧ್ರುವಂತ್‌ಗೆ ನೀಡಿದ ಸೀಸನ್ ಚಪ್ಪಾಳೆಯನ್ನು ವಾರದ ಚಪ್ಪಾಳೆ ಎಂದು ತಿದ್ದುಪಡಿ ಮಾಡಿ ಕಲ್ಲರ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೇಪೆ ಹಚ್ಚುವ ಕೆಲಸವನ್ನು ಸದ್ದಿಲ್ಲದೆ ಮಾಡಿದೆ.
