ಬೆಂ.ಗ್ರಾ.ಜಿಲ್ಲೆ: ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ವಿಕಲಚೇತನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಸ್ಥಳೀಯ ಸಮರ್ಥ ವಿಕಲಚೇತನರನ್ನು ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನಾಗಿ ಹಾಗೂ ನಗರಸಭೆಗೆ ನಗರ ಪುನರ್ವಸತಿ ಕಾರ್ಯಕರ್ತರನ್ನಾಗಿ ಗೌರವಧನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ (Applications invited).
ಖಾಲಿ ಇರುವ ನಗರಸಭೆ/ಗ್ರಾಮ ಪಂಚಾಯಿತಿಗಳ ವಿವರ
ನೆಲಮಂಗಲದಲ್ಲಿ ದೊಡ್ಡಬೆಲೆ ಮತ್ತು ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿಗಳು.
ದೊಡ್ಡಬಳ್ಳಾಪುರದಲ್ಲಿ ಹಣಬೆ, ಹೆಗ್ಗಡಹಳ್ಳಿ ಹಾಗೂ ಕೆಸ್ತೂರು ಗ್ರಾಮ ಪಂಚಾಯಿತಿಗಳು.
ದೇವನಹಳ್ಳಿಯಲ್ಲಿಜಾಲಿಗೆ, ಕನ್ನಮಂಗಲ ಹಾಗೂ ಅವತಿ ಗ್ರಾಮ ಪಂಚಾಯಿತಿ. ಹೊಸಕೋಟೆಯಲ್ಲಿ ಓರೋಹಳ್ಳಿ ಗ್ರಾಮ ಪಂಚಾಯಿತಿ.
ಹೊಸಕೋಟೆ ಟೌನ್-ನಗರಸಭೆ-01 ಹುದ್ದೆ, ದೊಡ್ಡಬಳ್ಳಾಪುರ ಟೌನ್-ನಗರಸಭೆ-01 ಹುದ್ದೆ.
ಆಸಕ್ತ ವಿಕಲಚೇತನ ವ್ಯಕ್ತಿಗಳು ಷರತ್ತುಗಳಿಗೊಳಪಟ್ಟು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ದಿನಾಂಕ:23.01.2026 ರೊಳಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಛೇರಿ, ನಂ.3 ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ,ದೇವನಹಳ್ಳಿ ತಾಲ್ಲೂಕು, ಬೆಂಗಳೂರುಗ್ರಾಮಾಂತರ ಜಿಲ್ಲೆ-562110ಪತ್ರದ ವಿಳಾಸಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.