ಶಬರಿಮಲೆ (ಕೇರಳ): ಸುಗ್ಗಿ ಹಬ್ಬ ಸಂಕ್ರಾಂತಿಯಂದು ಇತಿಹಾಸ ಪ್ರಸಿದ್ಧ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ (Shabarimala Ayyappa) ಮಕರ ಜ್ಯೋತಿ (Makara Jyothi) ರೂಪದಲ್ಲಿ ದರ್ಶನ ನೀಡಿದ್ದಾರೆ.
ಇಂದು (ಜ.14) ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿಯ ದರ್ಶನವಾಯಿತು. ಈ ವೇಳೆ ಲಕ್ಷಾಂತರ ಭಕ್ತರು ಅಯ್ಯಪ್ಪನ ಭಜನೆ ಮಾಡುತ್ತಾ ಮಕರ ಜ್ಯೋತಿಯ ದರ್ಶನ ಪಡೆದು ಪುನೀತರಾದರು.
✨ Had a truly divine experience witnessing and doing a virtual darshan of Ayyappa Swamy Makara Jyothi from Shabarimala. 🙏
— Matam Mayurnath (@Mayurmatam) January 14, 2026
Feeling blessed beyond words! 🌟🕉️#MakaraJyothi #ShabarimalaDarshan #Blessed #Makaravilakku #Makaravilakk pic.twitter.com/QHCh5ThxSa
ಮಕರ ಸಂಕ್ರಾಂತಿ ಪ್ರಯುಕ್ತ ಇಂದು ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು.
ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಂಡಿದ್ದಾನೆ.
ಭಕ್ತ ಸಮೂಹದ ನಿರ್ವಹಣೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಮತ್ತು ದೇಗುಲದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮಕರ ವಿಳಕ್ಕು ಎಂಬುದು ಇಲ್ಲ. ಇದು ಬೆಟ್ಟಗಳ ಸಾಲಿನಲ್ಲಿರುವ ಬುಡಕಟ್ಟು ಜನರು ಹೊತ್ತಿಸುತ್ತಿದ್ದ ಅಗ್ನಿ ಎಂಬ ವಾದವಿದ್ದರೂ ಪ್ರತೀ ವರ್ಷ ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪ ಸ್ವಾಮಿ ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುದು ಭಕ್ತಗಣದ ನಂಬಿಕೆ