ದೊಡ್ಡಬಳ್ಳಾಪುರ: ಶ್ರೀ ಹುಲ್ಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ಜ.24 ಶನಿವಾರದಿಂದ 25 ನೇ ಭಾನುವಾರದವರೆಗೆ ಶ್ರೀ ಹುಲ್ಲುಕುಡಿ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹುಲ್ಲುಕುಡಿ ಉತ್ಸವ 2026 (Hulkudi Utsava 2026) ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದ (ಜ.16) ಶುಕ್ರವಾರದಿಂದ ಜ.23ರ ಶುಕ್ರವಾರದವರೆಗೆ ಹೈನುಗಾರಿಕೆಯನ್ನು ಪ್ರೊತ್ಸಾಹಿಸುವ ಸಲುವಾಗಿ ಹಾಲು ಕರೆಯುವ ಸ್ಪರ್ಧೆ ಯನ್ನು ಏರ್ಪಡಿಸಲಾಗಿದ್ದು, ನಾಳೆ ಸಂಜೆ ದೊಡ್ಡಬೆಳವಂಗಲದಲ್ಲಿ ಚಾಲನೆ ನೀಡಲಾಗುತ್ತಿದೆ.
ಪ್ರಥಮ ಬಹುಮಾನ 10,000/- ನಗದು ದ್ವಿತೀಯ ಬಹುಮಾನ 5,000/- ನಗದು ತೃತೀಯ ಬಹುಮಾನ 2,500/- ನಗದು ಹಾಗೂ ಗ್ರಾಮದ ಪ್ರತ್ಯೇಕ ವಿಜೇತರಿಗೆ ಹಾಲಿನ ಕ್ಯಾನ್ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. (ಎಐ ಚಿತ್ರ ಬಳಸಲಾಗಿದೆ)