ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿಯ (Makara Sankranti) ಸಂದರ್ಭದಲ್ಲಿ ಸದ್ಗುರುಗಳು ದೇಶದ ಆಹಾರದ ಸ್ಥಿತಿ, ಮಣ್ಣಿನ ಅವನತಿ, ನೀರಿನ ಕೊರತೆ ಮತ್ತು ರೈತರ ಸಂಕಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿದಿನ ಕೇವಲ ಎರಡು ನಿಮಿಷಗಳನ್ನು ಮೀಸಲಿಡುವಂತೆ ಸದ್ಗುರುಗಳು ಮನವಿ ಮಾಡಿದ್ದಾರೆ.
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ನಿಗದಿಪಡಿಸಲಾಗಿರುವ ಲಿಂಗ ಭೈರವಿ, ನವಗ್ರಹ ದೇವಾಲಯಗಳು ಮತ್ತು ತೀರ್ಥಕುಂಡಗಳ ಪ್ರತಿಷ್ಠಾಪನೆಯೊಂದಿಗೆ ಕರ್ನಾಟಕಕ್ಕೆ ಒಂದು ಮಹತ್ತರವಾದ ಆಧ್ಯಾತ್ಮಿಕ ಉಡುಗೊರೆಯನ್ನು ಸದ್ಗುರುಗಳು ಘೋಷಿಸಿದರು.
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ 5 ದಿನಗಳ ತೀವ್ರತರ ಪ್ರತಿಷ್ಠಾಪನಾ ಪ್ರಕ್ರಿಯೆಯಾಗಿರುತ್ತದೆ ಎಂದು ಸದ್ಗುರುಗಳು ಹಂಚಿಕೊಂಡರು.
ನಿನ್ನೆ ದಿನವಿಡೀ ನಡೆದ ಆಚರಣೆಗಳಲ್ಲಿ ನಾಗ, ಯೋಗೇಶ್ವರ ಲಿಂಗದ ಪ್ರತಿಷ್ಠಾಪಿತ ಸ್ಥಳಗಳಲ್ಲಿ ವಿಶೇಷ ಅರ್ಪಣೆಗಳು ಮತ್ತು ಪ್ರಕ್ರಿಯೆಗಳು ನಡೆದಿದ್ದು, ಜೊತೆಗೆ ಡೊಳ್ಳು ಕುಣಿತ ಸೇರಿದಂತೆ ಸ್ಥಳೀಯ ಜನಪದ ಕಲಾವಿದರಿಂದ ಮನಮೋಹಕ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಂತೆ ಸೌಂಡ್ಸ್ ಆಫ್ ಈಶ ತಂಡದ ಸಂಗೀತ ಮತ್ತು ಈಶ ಸಂಸ್ಕೃತಿಯ ಭಕ್ತಿ ನೃತ್ಯ ಹಾಗೂ ಪ್ರಾಚೀನ ಸಮರ ಕಲೆ ಕಲರಿಪಯಟ್ಟು ಪ್ರದರ್ಶನಗಳು ಕೂಡ ನಡೆದವು.
ನಂತರ, ಕಾರ್ಯಕ್ರಮದಲ್ಲಿ ಬ್ರಹ್ಮಚಾರಿಗಳು ಆದಿಯೋಗಿಗೆ ಭವ್ಯ ಆರತಿಯನ್ನು ಅರ್ಪಿಸಿದರು. ಅದರ ಬಳಿಕ, ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಳಕು, ಧ್ವನಿ ಮತ್ತು ಪ್ರೊಜೆಕ್ಷನ್‌ಗಳ ಮೂಲಕ ಆದಿಯೋಗಿಯ ಕಥೆ ಮತ್ತು ಯೋಗ ವಿಜ್ಞಾನವನ್ನು ಅದ್ಭುತ ದೃಶ್ಯ ಮಾಧ್ಯಮದಲ್ಲಿ ವರ್ಣಿಸುವ ಆದಿಯೋಗಿ ದಿವ್ಯ ದರ್ಶನವು ಎಲ್ಲ ವಯೋಮಾನದವರನ್ನು ಮನಸೂರೆಗೊಳಿಸಿತು.
ಹಬ್ಬದ ಮಹತ್ವದ ಬಗ್ಗೆ ಗಹನವಾದ ಒಳನೋಟಗಳನ್ನು ಹಂಚಿಕೊಂಡ ಸದ್ಗುರುಗಳು, “ಮಕರ ಸಂಕ್ರಾಂತಿ ಒಂದು ಕಲ್ಪಿತ ಹಬ್ಬವಲ್ಲ, ಇದು ನಂಬಿಕೆಯ ಕಟ್ಟುಪಾಡಿನ ಬಗ್ಗೆಯೂ ಅಲ್ಲ. ಇದು ಜೀವನದ ಒಂದು ಅತ್ಯಂತ ಸೂಕ್ಷ್ಮ ಅವಲೋಕನ.. ಇದು ವಸಂತ ಋತುವಿನ ಆರಂಭ, ಜೀವನವು ಅನೇಕ ವಿಭಿನ್ನ ರೀತಿಯಲ್ಲಿ ವಿಕಾಸಗೊಳ್ಳುತ್ತದೆ ಮತ್ತು ಇದು ಸುಗ್ಗಿಯ ಹಬ್ಬವೂ ಹೌದು, ಕೃಷಿಗೆ ಮಾತ್ರವಲ್ಲದೆ ಆಧ್ಯಾತ್ಮಿಕ ಅನ್ವೇಷಕರಿಗೂ ಇದು ಸುಗ್ಗಿಯ ಸಮಯವೆಂದು ಪರಿಗಣಿಸಲಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಈ ದಿನದಂದು ನಮ್ಮ ಸುತ್ತಲಿನ ಜೀವನದೊಂದಿಗಿನ ನಮ್ಮ ಸಂಬಂಧವನ್ನು ಆಚರಿಸಲಾಗುತ್ತದೆ” ಎಂದು ಹೇಳಿದರು.
ಈ ಭೂಮಿಯ ಮೇಲಿನ ಜೀವನ ಯಾರೊಬ್ಬರಿಗೂ ಮಾತ್ರ ಸೀಮಿತವಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಉಸಿರಾಡುವಾಗ ನಾವು ಒಳಗೆಳೆಯುವ ಗಾಳಿಯನ್ನು ಮರ ಹೊರಬಿಡುತ್ತದೆ, ಮತ್ತು ನಾವು ಹೊರಬಿಡುವ ಗಾಳಿಯನ್ನು ಮರ ಒಳಗೆಳೆಯುತ್ತದೆ.
ನಮ್ಮ ಜೀವನವು ಒಂದು ದೊಡ್ಡ ವಿದ್ಯಮಾನವಾಗಿದೆ, ನಾವು ಅದರ ಒಂದು ಚಿಕ್ಕ ಭಾಗವಷ್ಟೇ. ನಾವು ಪ್ರತ್ಯೇಕ ಪ್ರಕ್ರಿಯೆಯಲ್ಲ. ಆದ್ದರಿಂದ, ಮಕರ ಸಂಕ್ರಾಂತಿ ಎಂಬುದು ಒಳಗೂಡಿಸಿಕೊಳ್ಳುವಿಕೆಯ ಪ್ರಕ್ರಿಯೆಯಾಗಿದ್ದು, ಆ ದಿಕ್ಕಿನಲ್ಲಿ ನೀಡುವ ಬಲವಾದ ಸಂದೇಶವಾಗಿದೆ ಎಂದು ಮುಂದುವರಿಸುತ್ತಾ ಹೇಳಿದರು.
ದಿನದ ಆರಂಭದಲ್ಲಿ, ಸದ್ಗುರುಗಳು ಮತ್ತು ಅವರು ಸದ್ಗುರು ಸನ್ನಿಧಿಗೆ ಆಗಮಿಸುವ ಸಂದರ್ಶಕರ ಸುರಕ್ಷತೆಗಾಗಿ ಹೊಸ ಚಿಕ್ಕಬಳ್ಳಾಪುರ ಪೊಲೀಸ್ ಚೆಕ್ ಪೋಸ್ಟ್ ಅನ್ನು ಉದ್ಘಾಟಿಸಿದರು.
ಸದ್ಗುರು ಸನ್ನಿಧಿಯಲ್ಲಿ ನಡೆದ ಐದು ದಿನಗಳ ಸಾಂಪ್ರದಾಯಿಕ ಜಾತ್ರೆಯ ಭಾಗವಾಗಿ, ಅವರೆಕಾಯಿ ಹಬ್ಬವು ದಕ್ಷಿಣ ಕರ್ನಾಟಕದ ಅವರೆಕಾಳಿನ ವೈಭವವನ್ನು ಮರುಕಳಿಸುವಂತೆ ಮಾಡಿತು.
ಈ ಪ್ರದೇಶದಲ್ಲಿ ಮಾತ್ರ ಲಭ್ಯವಿರುವ ಈ ವಿಶೇಷ ಕಾಳುಗಳ ಬಗ್ಗೆ ಮಾತನಾಡಿದ ಸದ್ಗುರುಗಳು, “ಇವು ಹೆಚ್ಚಾಗಿ ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಲಭ್ಯವಿರುವ ವಿಶೇಷವಾದ ಕಾಳುಗಳು. ಆದ್ದರಿಂದ ಈ ಋತುವಿನಲ್ಲಿ, ಎಲ್ಲವನ್ನೂ ಈ ಕಾಳುಗಳಿಂದಲೇ ತಯಾರಿಸಲಾಗುತ್ತದೆ” ಎಂದು ಹೇಳಿದರು.
ಹಬ್ಬವು ಅವರೆಬೇಳೆ ಟ್ವಿಸ್ಟರ್‌ಗಳು ಮತ್ತು ಅವರೆಬೇಳೆ ಹೋಳಿಗೆಯಿಂದ ಹಿಡಿದು ಅವರೆಬೇಳೆ ಪಾವ್ ಭಾಜಿ ಮತ್ತು ಅದಕ್ಕೂ ಮೀರಿದ ಈ ಸಾಂಪ್ರದಾಯಿಕ ಅವರೆಕಾಳುಗಳಿಂದ ತಯಾರಿಸಿದ ಸಾಂಪ್ರದಾಯಿಕ ಖಾದ್ಯಗಳ ಶ್ರೇಣಿಯೊಂದಿಗೆ ಸ್ಥಳೀಯ ಪಾಕವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಿತು.
ಸಂದರ್ಶಕರು ಗ್ರಾಮೀಣ ಕರ್ನಾಟಕದ ಆಹಾರ ಸಂಪ್ರದಾಯಗಳ ಜೀವಂತ ಚಿತ್ರಣವನ್ನು ಅನುಭವಿಸಿದರು ಮತ್ತು ಭೂಮಿ, ಸುಗ್ಗಿ ಹಾಗೂ ಸನ್ನಿಧಿಯಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಆಚರಣೆಗಳೊಂದಿಗಿನ ಅವರ ಸಂಪರ್ಕವೂ ಆಳವಾಗಿ ಬಲಗೊಂಡಿತು.
ಭಾರತದ ಬೆನ್ನೆಲುಬಾಗಿರುವ ಕೃಷಿಗೆ ಬೆಂಬಲ ನೀಡುವ ಅಗತ್ಯವಿದೆ ಎಂಬುದನ್ನು ಅವರು ಈ ಮೂಲಕ ವಿಶೇಷವಾಗಿ ಒತ್ತಿ ಹೇಳಿದರು.
ರೈತರಿಗಾಗಿ ಕರೆ
“ನೀವು ಎಲ್ಲರೂ ಪ್ರಜ್ಞೆಯಿಂದ ಕೂಡಿದ್ದರೆ… ಪ್ರತಿದಿನ ಕೇವಲ ಎರಡು ನಿಮಿಷ… ಈ ದೇಶದ ಮಣ್ಣು, ಈ ದೇಶದ ನೀರು, ಈ ದೇಶದ ಆಹಾರದ ಸ್ಥಿತಿ ಮತ್ತು ರೈತರ ಸಂಕಷ್ಟಗಳ ಬಗ್ಗೆ ಪ್ರತಿದಿನ ನಿಮ್ಮ ಫೋನ್‌ನಲ್ಲಿ ಸ್ವಲ್ಪ ಸಂಶೋಧನೆ ಮಾಡಿ ಏನನ್ನಾದರೂ ಹೇಳಿ.” ಎಂದು ಸದ್ಗುರುಗಳು ಹೇಳಿದರು.
“ಸ್ಥಳೀಯ ರೈತರಿಗೆ ಬೆಂಬಲ ನೀಡುವುದು ಅತ್ಯಂತ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ, ಕೃಷಿಯನ್ನು ಲಾಭದಾಯಕ ಪ್ರಕ್ರಿಯೆಯನ್ನಾಗಿ ಮಾಡಬೇಕು.”
ಮುಂಜಾನೆಯಿಂದಲೇ, ಭಕ್ತರು ತಮ್ಮ ಭಕ್ತಿಯನ್ನು ಆಳವಾದ ಅನುಭವಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟ ವಿವಿಧ ಅರ್ಪಣೆಗಳಲ್ಲಿ ಭಾಗವಹಿಸಿದರು.
ಸಂಜೆ, ಯೋಗೇಶ್ವರ ಲಿಂಗದಲ್ಲಿ ಸದ್ಗುರುಗಳ ಸಮ್ಮುಖದಲ್ಲಿ ವಿಶೇಷ ಪ್ರಕ್ರಿಯೆಯು, ಸೌರ ಚಕ್ರದ ಈ ಬದಲಾವಣೆಯ ಕಾಲದಲ್ಲಿ ಭಾಗವಹಿಸುವವರನ್ನು ನಿಶ್ಚಲತೆ ಮತ್ತು ಆಂತರಿಕ ಸಮತೋಲನವನ್ನು ಅನುಭವಿಸಲು ಆಹ್ವಾನಿಸಿತು.