ದೊಡ್ಡಬಳ್ಳಾಪುರ: ಬಿಗ್ ಬಾಸ್ ಕನ್ನಡ ಸೀಸನ್ 12 (BiggBoss Kannada 12) ಫಿನಾಲೆ ವಾರ ಅಂತಿಮವಾಗುತ್ತಿದ್ದು. ಈ ಭಾನುವಾರವೇ ಈ ಸೀಸನ್‌ನ ವಿಜೇತ ಯಾರು ಎಂದು ನಿರೂಪಕ ಸುದೀಪ್ ಘೋಷಿದಲಿದ್ದಾರೆ.
ಹೀಗಿರುವಾಗ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಮನೆಮಾಡಿದೆ. ವೋಟಿಂಗ್ ಲೈನ್‌ಗಳು ಈಗಾಗಲೇ ಓಪನ್ ಆಗಿದ್ದು , ಪ್ರತಿಯೊಬ್ಬ ಸ್ಪರ್ಧಿಯ ಅಭಿಮಾನಿ ಬಳಗವೂ ತಮ್ಮ ಮೆಚ್ಚಿನ ಸ್ಪರ್ಧಿಯನ್ನು ಫಿನಾಲೆಗೆ ಕರೆದುಕೊಂಡು ಹೋಗಲು ವೋಟಿಂಗ್ ಅಭಿಯಾನ ನಡೆಸುತ್ತಿದೆ.
ಈಗ ಮನೆಯಲ್ಲಿ ಉಳಿದಿರುವ ಆರು ಮಂದಿ ಸ್ಪರ್ಧಿಗಳು ಗಿಲ್ಲಿ, ರಕ್ಷಿತ, ರಘು, ಅಶ್ವಿನಿ, ಕಾವ್ಯಾ ಮತ್ತು ಧನುಶ್.
ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಸೀಸನ್‌ನಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇವರಲ್ಲಿ ಯಾರು ಟಾಪ್ 5ಗೆ ಸೇರುವರೆಂಬ ಪ್ರಶ್ನೆಗೆ ಅಭಿಮಾನಿಗಳ ಪ್ರತಿಕ್ರಿಯೆ ತೀವ್ರವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ನಟನ ಪರವಾಗಿ ವೋಟಿಂಗ್ ಅಭಿಯಾನಗಳು, ಫ್ಯಾನ್ ಮೀಟಿಂಗ್‌ಗಳು, ವಿಡಿಯೋಗಳು ಮತ್ತು ರೀಲ್ಸ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಬಿ.ಎಸ್. ಚಂದ್ರಶೇಖರ್ ಮತಯಾಚನೆ..!
ಇದರ ನಡುವೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಅವರು ಗಿಲ್ಲಿ ನಟನ ಪರ ಬಾಹಿರವಾಗಿ ಮತಯಾಚನೆ ಮಾಡಿದ್ದಾರೆ.
ಈ ಕುರಿತಂತೆ ಅವರು ಗಿಲ್ಲಿ ನಟನಿಗೆ ಮತ ನೀಡುತ್ತಾ ಮಾತನಾಡಿ, ಬಿಗ್ ಬಾಸ್ ಕನ್ನಡ ಸೀಸನ್ 12 ಎಲ್ಲಾ 6 ಮಂದಿಗಳು ಚೆನ್ನಾಗಿ ಆಡುತ್ತಿದ್ದಾರೆ. ಅಂತಿಮ ಹಂತದಲ್ಲಿ ನನ್ನ ಮತವನ್ನು ಗಿಲ್ಲಿ ನಟನಿಗೆ ನೀಡುತ್ತಿದ್ದು, ನಮ್ಮ ಸಂಘಟನೆಯ ಎಲ್ಲಾ ಕಾರ್ಯಕರ್ತರು, ಸಂಘಟನೆಯ ಬೆಂಬಲಿಗರು ಎಲ್ಲಾ 99 ಮತಗಳನ್ನು ಕಲೆಯಲ್ಲಿ ಶ್ರೀಮಂತನಾದ ಗಿಲ್ಲಿ ನಟನಿಗೆ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೆ ಜೈ ಬಿಗ್ ಬಾಸ್, ಜೈ ಗಿಲ್ಲಿ, ಜೈ ಕರ್ನಾಟಕ ಎಂದು ಬಿಎಸ್ ಚಂದ್ರಶೇಖರ್ ಹೇಳಿದ್ದಾರೆ.