ದೊಡ್ಡಬಳ್ಳಾಪುರ: ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ವತಿಯಿಂದ (Photographers Association) ಸಂಕ್ರಾಂತಿ ಅಂಗವಾಗಿ ಜ.18ರಂದು ಛಾಯಾ ಸಂಕ್ರಾಂತಿ ಸಂಭ್ರಮ-2026 (Sankranti Celebrations-2026) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಪ್ರಥಮ ಬಾರಿಗೆ ಮಕ್ಕಳ ಭಾರತೀಯ ಹಾಗೂ ಪಾಶ್ಚಿಮಾತ್ಯ ಉಡುಪುಗಳ ಫ್ಯಾಷನ್ ಶೋ, ರ್ಯಾಂಪ್ ಶೋ ಪ್ರದರ್ಶನ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಆರ್.ಮೋಹನ್ ತಿಳಿಸಿದ್ದಾರೆ.
ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರ ಸಂಘದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಬಾರಿ ವಿಭಿನ್ನವಾಗಿ ಮಕ್ಕಳ ರ್ಯಾಂಪ್ ಶೋ ಪ್ರದರ್ಶನ ಏರ್ಪಡಿಸಲಾಗಿದೆ.
ಜ.18ರಂದು ಸಂಜೆ 5.30ಕ್ಕೆ ಆರಂಭವಾಗಲಿರುವ ಈ ಪ್ರದರ್ಶನಲ್ಲಿ ತಾಲೂಕಿನ 5 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದಾಗಿದೆ. ವಿಜೇತರಿಗೆ ನಗದು ಬಹುಮಾನ ಹಾಗು ವಿಶೇಷ ಕೊಡುಗೆ ನೀಡಲಾಗುವುದು.
ಇದೇ ದಿನ ಬೆಳಿಗ್ಗೆ 10ಗಂಟೆಗೆ ಮಹಿಳೆಯರಿಗಾಗಿ ವರ್ಣರಂಜಿತ ರಂಗೋಲಿ ಸ್ಪರ್ಧೆಯನ್ನು ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ, ವಿಶೇಷ ಕೊಡುಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರವನ್ನು ನೀಡಲಾಗುವುದು. ತಾಲೂಕಿನ ಜನತೆ ಈ ಕಾರ್ಯಕ್ರಮವನ್ನು ಉತ್ತೇಜಿಸಬೇಕೆಂದು ಈ ಮೂಲಕ ಕೋರುತ್ತಿದ್ದೇವೆ ಎಂದರು.
ಈ ವೇಳೆ ದೊಡ್ಡಬಳ್ಳಾಪುರ ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಗೌರವ ಅಧ್ಯಕ್ಷ ಕೆ.ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾರುತಿ, ಉಪಾಧ್ಯಕ್ಷರಾದ ಗೋಪಾಲ್ ಮುನಿರಾಜು, ಖಜಾಂಚಿ ಖಜಾಂಚಿ ರಾಜಪ್ಪಿ, ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರಾಜೇಶ್, ಬೃಂದಾವನಿ, ಸಂಚಾಲಕ ಹರೀಶ್ ಬಾಬು ಸಂಘದ ನಿರ್ದೇಶಕರು ಹಾಜರಿದ್ದರು.