ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆತನ ತಾಯಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಮಾಡಿದ್ದ ಮನವಿಯನ್ನು ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ತಿರಸ್ಕರಿಸಿದ್ದು, ನಟ ದರ್ಶನ್ (Darshan) ಹಾಗೂ ತಂಡಕ್ಕೆ ಮುನ್ನಡೆ ದೊರೆತಿದೆ.
ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ನೀಡಿದ್ದ ಹೇಳಿಕೆಯಲ್ಲಿ ಗೊಂದಲ ಇದೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ರತ್ನಪ್ರಭಾ ಸಾಕ್ಷಿ ಹೇಳಿದ್ದನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು.
ಆದರೇ, ಪ್ರಾಸಿಕ್ಯೂಷನ್ ಮಾಡಿದ್ದ ಈ ಮನವಿ ಕೋರ್ಟ್ ತಿರಸ್ಕರಿಸಿದೆ. ಇದರಿಂದ ಪ್ರಾಸಿಕ್ಯೂಷನ್ ಹಾಗೂ ಪೊಲೀಸರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
ಕೋರ್ಟ್ ಈಗ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ, ಸಾಕ್ಷಿಯನ್ನು ಪರಿಗಣಿಸಲಿದೆ. ಆದರೆ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರೇ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸರಿಯಾಗಿ ಸಾಕ್ಷಿ ಹೇಳಿಲ್ಲ. ತಾವು ಈ ಹಿಂದೆ ಪೊಲೀಸರಿಗೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಪರ ವಕೀಲರು, ರತ್ನಪ್ರಭಾರ ಸಾಕ್ಷ್ಯವನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಕೋರ್ಟ್ ಗೆ ಮನವಿ ಮಾಡಿದ್ದರು.
ರತ್ನಪ್ರಭಾ ಅವರು ಪ್ರಾಸಿಕ್ಯೂಷನ್ ಪರ ಸಾಕ್ಷಿ ಯಾಗಿದ್ದರು. ಆದರೇ, ಪೊಲೀಸರ ತನಿಖಾ ವರದಿಗೂ, ರತ್ನಪ್ರಭಾ ಅವರ ಹೇಳಿಕೆಗೂ ವೆತ್ಯಾಸ ಇರುವುದರಿಂದಾಗಿ. ಪ್ರಾಸಿಕ್ಯೂಷನ್ ಪರವಾಗಿ ಸರಿಯಾಗಿ ಸಾಕ್ಷಿಯಾಗಲು ಸಾಧ್ಯವಾಗಿಲ್ಲ.
ಹೀಗಾಗಿ ಪೊಲೀಸರ ಪರ ಮೊದಲ ಸಾಕ್ಷಿಯೇ ಹಿನ್ನಡೆಯಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೋರ್ಟ್ ವಿಚಾರಣೆಯೂ ಈಗ ಕುತೂಹಲಕ್ಕೆ ಕಾರಣವಾಗಿದೆ ಎಂದು ಖಾಸಗಿ ಚಾನಲ್‌ಗಳು ವರದಿ ಮಾಡಿವೆ.