ನಾಗುರ: ಹೊಸ ಪೀಳಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಮತ್ತು ಹಳೆಯ ಪೀಳಿಗೆಯು ಪಕ್ಕಕ್ಕೆ ಸರಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ಈ ಕುರಿತಂತೆ ನಾಗ್ಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಡ್ಕರಿ ಅವರು ಮಾತನಾಡಿದ್ದು, 75 ವರ್ಷದ ಬಳಿಕವೂ ಅಧಿಕಾರದಲ್ಲಿ ಮುಂದುವರಿದಿರುವ ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಲು ಹೇಳಿದ್ದಾರೆ ಎಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಡ್ವಾಂಟೇಜ್ ವಿದರ್ಭ ಉಪಕ್ರಮದಲ್ಲಿ ಕಾಳೆ ಯುವ ಪೀಳಿಗೆಯನ್ನು ತೊಡಗಿಸಿಕೊಂಡಿದ್ದಾರೆ. ನಾಯಕತ್ವವನ್ನು ನಿಧಾನವಾಗಿ ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಹಿರಿಯರು ಮಾರ್ಗದರ್ಶನ ಮತ್ತು ಬೆಂಬಲ ನೀಡಿದರೆ, ಕೆಲಸಗಳು ಸುಗಮವಾಗಿ ನಡೆಯಲು ಪ್ರಾರಂಭಿಸಿದ ನಂತರ, ಅವರು ಹಿಂದೆ ಸರಿದು ಹೊಸ ಪೀಳಿಗೆಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು ಮತ್ತು ತಾವು ಇತರ ಪಾತ್ರಗಳನ್ನು ನಿರ್ವಹಿಸಬೇಕು’ ಎಂದು ತಿಳಿಸಿದರು.
ಫೆಬ್ರುವರಿ 6 ರಿಂದ 8 ರವರೆಗೆ ನಾಗುರದಲ್ಲಿ ನಡೆಯುತ್ತಿರುವ ಅಡ್ವಾಂಟೇಜ್ ವಿದರ್ಭಎಕ್ಸ್‌ಪೋದ ಮೂರನೇ ವರ್ಷ ಇದಾಗಿದೆ. ವಿದರ್ಭ ಪ್ರದೇಶದಲ್ಲಿ ವಿವಿಧ ವಲಯಗಳಲ್ಲಿ ಉತ್ತಮ ಉದ್ಯಮಿಗಳಿದ್ದಾರೆ ಎಂದು ಎಐಡಿಯ ಮುಖ್ಯ ಮಾರ್ಗದರ್ಶಕರಾಗಿರುವ ಗಡ್ಕರಿ ಹೇಳಿದರು.
ವಿದರ್ಭ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅತ್ಯುತ್ತಮ ಉದ್ಯಮಿಗಳಿದ್ದಾರೆ ಎಂದು ಹೇಳಿದ ಅವರು,ವಿದರ್ಭವನ್ನು ಭಾರತೀಯ ಕೈಗಾರಿಕಾ ರಂಗದಲ್ಲಿ ಪ್ರಬಲ ಮತ್ತು ಉದಯೋನ್ಮುಖ ಬೆಳವಣಿಗೆ ಕೇಂದ್ರವನ್ನಾಗಿ ಮಾಡುವುದು ಮಹೋತ್ಸವದ ಉದ್ದೇಶವಾಗಿದೆ ಎಂದರು.
ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಕೈಗಾರಿಕಾ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಹಾಗೂ ಸೇವಾ ಕ್ಷೇತ್ರದ ಮಹತ್ವವನ್ನೂ ಗಡ್ಕರಿ ಒತ್ತಿ ಹೇಳಿದರು.