ದೊಡ್ಡಬಳ್ಳಾಪುರ: ರಂಗ ಭೂಮಿಯ ಸೇವೆಯಲ್ಲಿ ನಿರಂತರ ಕೃಷಿ ಮಾಡುತ್ತಿರುವ ರಂಗಕರ್ಮಿ ಚಿನ್ನುಪ್ರಕಾಶ್ (Chinnuprakash) ಶ್ರೀರಾಮನಹಳ್ಳಿ ಅವರಿಗೆ ವಿಶ್ವಮಾನವ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ 122ನೇ ಜಯಂತ್ಯುತ್ಸವ ಹಾಗೂ ನಾಡಿನ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರು ಸಾಹಿತ್ಯ ಮತ್ತು ಕಾನೂನಿನ ಕ್ಷೇತ್ರದಲ್ಲಿ ಸಹಾಯಕ ಆರಕ್ಷಕ ನಿರೀಕ್ಷಕರಾಗಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನವು ವಿಶ್ವಮಾನವ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತಿ ಡಾ. ಶಾಂತರಾಜು ಪ್ರಶಸ್ತಿ ಪ್ರದಾನ ಮಾಡಿದರು.
ನಟ ನಿರ್ದೇಶಕ ಮೂಗ್ ಸುರೇಶ್, ಕವಿ ಡಾ. ನಾಗೇಂದ್ರ ಆರ್. ಗುಂಬಳ್ಳಿ, ಯೋಗ ಶಿಕ್ಷಕರು ಡಾ.ಜಯರಾಮ್ ಗೌಡ, ಹಲೋ ಹಾಸನ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ರವಿನಾಕಲಗೂಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರಾಮನಗರದ ನಿವೃತ್ತ ಉಪನ್ಯಾಸಕರಾದ ಪೂರ್ಣಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಪುಟ್ಟರಾಜು ಉಪಸ್ಥಿತರಿದ್ದರು.