ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಕೊನಘಟ್ಟಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಕಾವತಿ ಕ್ಷೇತ್ರದಲ್ಲಿ 72ನೇ ವರ್ಷದ ಶ್ರೀ ಸೀತಾರಾಮಚಂದ್ರ ಸ್ವಾಮಿಯ (Sri Sitaramachandra Swamy) ಬ್ರಹ್ಮ ರಥೋತ್ಸವವು ಶ್ರದ್ಧಾ ಭಕ್ತಿ, ಸಂಭ್ರಮದಿಂದ ನೆರವೇರಿತು.
ದೊಡ್ಡಬಳ್ಳಾಪುರ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹೂ, ಹಣ್ಣು ಅರ್ಪಿಸಿ ಧನ್ಯತೆ ಮೆರೆದರು.
ರಥೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಸೀತಾರಾಮ ಕಲ್ಯಾಣೋತ್ಸವ, ಹಾಗೂ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಣಕ್ರಮಗಳು ನಡೆದವು.
ಸಾವಿರಾರು ಭಕ್ತಾದಿಗಳು ಶ್ರೀ ಸೀತಾರಾಮಚಂದ್ರಸ್ವಾಮಿಯ ದರ್ಶನ ಪಡೆದರು.
ರಥೋತ್ಸವದ ಅಂಗವಾಗಿ ಹಮಾಮ್, ಶಿವಪುರ, ಮುತ್ಸಂದ್ರ ಗ್ರಾಮಸ್ಥರಿಂದ ಪ್ರಸಾದ ವಿನಿಯೋಗ ನಡೆಯಿತು.