Astrology: ಶುಕ್ರವಾರ, ಜನವರಿ 23, 2026, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ
ವ್ಯಾಪಾರ ಮತ್ತು ವ್ಯವಹಾರ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತಿದ್ದೀರಿ,ಆದರೆ ಆಸ್ತಿಯೇ ಎಲ್ಲವೂ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ಹಣಕಾಸು ವ್ಯವಹಾರ, ಯೋಜನೆ ಗಳ ರೂಪಿಸಲು ಸಾಕಷ್ಟು ಸಮಯ ವಿರುತ್ತದೆ ಆದರೆ, ವೈಯಕ್ತಿಕ ಜೀವನಕ್ಕೂ ಕೊಂಚ ಸಮಯ ನೀಡಿ.
ವೃಷಭ ರಾಶಿ
ಕನಸು ಈಡೇರಿಕೆ ಯ ಸಮಯವಿದು. ಆದರೆ, ಇದಕ್ಕೆ ನಿಮ್ಮ ಪರಿಶ್ರಮದ ಅಗತ್ಯವಿದೆ. ವಾಹನ ಚಾಲನೆ ವೇಳೆ ಎಚ್ಚರವಿರಲಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳ ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ.
ಮಿಥುನ ರಾಶಿ
ತಪ್ಪು ಮಾಡುತ್ತಿರುವ ಮನೋಭಾವ ನಿಮ್ಮಲ್ಲಿದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಕ್ತಿ ಹೆಚ್ಚಿಸಿಕೊಂಡು ನಿಮ್ಮ ಮೇಲೆ ನಿಯಂತ್ರಣ ಹೊಂದಿ. ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ.
ಕಟಕ ರಾಶಿ
ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಉತ್ತಮ ದಿನ.ಇದು ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಇಲ್ಲಿಯವರೆಗೆ ಅನವಶ್ಯಕವಾಗಿ ಹಣ ವ್ಯಯಿಸುತ್ತಿದ್ದವರಿಗೆ ಹಣಕಾಸಿನ ಕೊರತೆಯ ನಡುವೆ ದಿಢೀರ್ ಅವಶ್ಯಕತೆ ಉಂಟಾಗುವುದರಿಂದ ಹಣ ಸಂಪಾದಿಸುವುದು ಮತ್ತು ಉಳಿಸುವುದು ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ.
ಸಿಂಹ ರಾಶಿ
ರಾಜಿ ವಿಚಾರದಲ್ಲಿ ಕಷ್ಟಗಳನ್ನು ಎದುರಿಸಲಿದ್ದೀರಿ. ಸಂವೇದನಾಶೀಲ ಸಂಗತಿಯಾಗಿರುವ ಸಂದರ್ಭಗಳು ಎದುರಾಗಬಹುದು. ಬದಲಾವಣೆಗಳಿಗಿದು ಸಕಾಲವಲ್ಲ. ಎಚ್ಚರಿಕೆ ವಹಿಸಿ.
ಕನ್ಯಾ ರಾಶಿ
ಶುಕ್ರನ ಪ್ರಭಾವ ನಿಮ್ಮ ರಾಶಿ ಮೇಲಿದೆ. ಇತರರ ಅಗತ್ಯಗಳನ್ನು ಪೂರೈಸಲಿದ್ದೀರಿ. ಎಲ್ಲರನ್ನೂ ಎಲ್ಲಾ ವಿಚಾರದಲ್ಲಿ ತೃಪ್ತಿಪಡಿಸುವುದು ಅಸಾಧ್ಯ. ಬೇಸರ ಬೇಡ. ಮುನ್ನಡೆಯಿರಿ.
ತುಲಾ ರಾಶಿ
ಮನೆಯಲ್ಲಿ ಪ್ರೀತಿ ಮತ್ತು ತಿಳುವಳಿಕೆಯನ್ನು ಕಾಣುವಿರಿ.ನೀವು ಯೋಜನೆಯ ಸಂಶೋಧನೆಯಲ್ಲಿ ಕೆಲಸ ಮಾಡಬಹುದು. ಇದಲ್ಲದೇ ವ್ಯಾಪಾರಕ್ಕೆ ಸಂಬಂಧಿಸಿದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು.
ವೃಶ್ಚಿಕ ರಾಶಿ
ಕುಟುಂಬದ ಸದಸ್ಯರ ಉತ್ತಮ ಸಲಹೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಸಾಮರ್ಥ್ಯವು ಗಮನಾರ್ಹ ವಾಗಿರುತ್ತದೆ. ಹೊಸ ಆಲೋಚನೆ ಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಕ್ತ ಸಮಯ.
ಧನಸ್ಸು ರಾಶಿ
ನಿಮ್ಮ ಭಾವನಾತ್ಮಕ ಮಹತ್ವಾಕಾಂಕ್ಷೆಗಳನ್ನು ಈಡೇರುವ ಸಮಯವಿದು. ಆದರೆ, ನಿಮ್ಮ ನೈಜ ಸನ್ನಿವೇಶಗಳು ನಿಮ್ಮ ಭರವಸೆಯನ್ನು ತೃಪ್ತಿಪಡಿಸಲು ಅನುಮತಿಸುತ್ತದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.
ಮಕರ ರಾಶಿ
ಕುಟುಂಬದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನೀವು ಏನನ್ನಾದರೂ ಮಾಡಬೇಕು. ಇಂದು ಹಿಂದಿನ ಮೊತ್ತವನ್ನು ಇನ್ನೂ ಹಿಂತಿರುಗಿಸದ ಸಂಬಂಧಿಕರಿಗೆ ನಿಮ್ಮ ಹಣವನ್ನು ಸಾಲ ನೀಡುವುದನ್ನು ತಪ್ಪಿಸಿ. ಪ್ರೀತಿಪಾತ್ರರ ಜೊತೆ ವಾದಗಳನ್ನು ಉಂಟು ಮಾಡುವ ವಿವಾದಾತ್ಮಕ ಸಮಸ್ಯೆಗಳನ್ನು ನೀವು ತಪ್ಪಿಸಬೇಕು.
ಕುಂಭ ರಾಶಿ
ಮೂಲಭೂತ ಅಂಶಗಳನ್ನು ಉತ್ತಮವಾಗಿ ನಿಭಾಯಿಸಿದರೆ ನಿಮ್ಮ ಯೋಜನೆಗಳು ಉತ್ತಮವಾಗಿರುತ್ತವೆ. ಯಾವುದನ್ನೂ ಮತ್ತು ಯಾರನ್ನೂ ಲಘುವಾಗಿ ಪರಿಗಣಿಸಬೇಡಿ, ಕೆಲಸವು ಯೋಗ್ಯವಾಗಿದೆ ಎಂದೆನಿಸಿದರೆ, ಅದನ್ನು ನೀವೇ ಮಾಡುವುದು ಉತ್ತಮವಾಗಿರುತ್ತದೆ.
ಮೀನ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಮತ್ತು ಅನಗತ್ಯ ವಿಶ್ಲೇಷಣೆ ಮತ್ತು ಊಹಾಪೋಹಗಳಿಂದ ದೂರವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಕಡಿಮೆ ಯಾಗುವ ಸಾಧ್ಯತೆಯಿದೆ.
ತಿಥಿ: ಪಂಚಮಿ(ವಸಂತ ಪಂಚಮಿ)
ನಕ್ಷತ್ರ: ಪೂರ್ವಾಭಾದ್ರ ನಕ್ಷತ್ರ
ರಾಹುಕಾಲ: 10:30AM ರಿಂದ 12:00PM
ಗುಳಿಕಕಾಲ: 07:30AM ರಿಂದ 09:00AM
ಯಮಗಂಡಕಾಲ: 03:00PM ರಿಂದ 04:30PM
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122