ದೊಡ್ಡಬಳ್ಳಾಪುರ: ಒಳಚರಂಡಿ ಕೊಳಚೆ ನೀರಿನ ಮೂರನೇ ಹಂತದ ಶುದ್ದೀಕರಣ ಘಟಕ ಸ್ಥಾಪನೆಗೆ ಆಗ್ರಹಿಸಿ ನಗರದ ತಾಲ್ಲೂಕು ಕಚೇರಿ ಮುಂದೆ ಗುರುವಾರದಿಂದ ಆರಂಭವಾಗಿರುವ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ (Fast-unto-death protest) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಗಾರರ ಸುಸ್ತಾಗಿ ಮಲಗಿದ್ದಾರೆ.
ನಗರಸಭೆ ವ್ಯಾಪ್ತಿಯಿಂದ ಹರಿಯುತ್ತಿರುವ ಒಳಚರಂಡಿ ಕೊಳಚೆ ನೀರು ಶುದ್ದೀಕರಿಸಿ ಬಿಡುವಂತೆ ಏಳು ವರ್ಷದಿಂದಲೂ ಹೋರಾಟ ಮಾಡಲಾಗುತ್ತಿದೆ. ಪ್ರತಿ ಬಾರಿ ಹೋರಾಟ ಅರಭಿಸಿದಾಗಲೂ ಅಧಿಕಾರಿಗಳು, ಜನಪ್ರತಿನಿ-ಧಿಗಳು ಸುಳ್ಳು ಭರವಸೆ ನೀಡುತ್ತಲೇ ನಮ್ಮನ್ನು ವಂಚಿಸಸಿದ್ದಾರೆ ಎಂದು ಸತ್ಯಾಗ್ರಹನಿರತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಳಚೆ ನೀರಿನಿಂದ ಮಜಾರಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿಗಳ ಸುಮಾರು 50 ಸಾವಿರ ಜನರ ಆರೋಗ್ಯ ಹದಗೆಟ್ಟರೂ ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ನೆಪವನ್ನೇ ಹೇಳುತ್ತಾ ಬರಲಾಗುತ್ತಿದೆ. ಅಧಿಕಾರಿಗಳು ಸುಳ್ಳು ಭರಸವೆ ನೀಡಿ ಹೋರಾಟದ ದಿಕ್ಕುತಪ್ಪಿಸುತ್ತಿದ್ದಾರೆ.
ಚಿಕ್ಕತುಮಕೂರು ಗ್ರಾಮದಲ್ಲಿ ಒಂದು ರಾತ್ರಿ ವಾಸ ಮಾಡಿದರೆ ಮಾತ್ರ ಕೊಳಚೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಗುತ್ತದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ತಾಲೂಕಿನ ಪ್ರಗತಿಪರ ಸಂಘಟನೆಗಳು ಹೋರಾಟದಲ್ಲಿ ಭಾಗವಿಸಿ ಬೆಂಬಲ ನೀಡುವಂತೆ ಆದಿತ್ಯ ನಾಗೇಶ್ ಮನವಿ ಮಾಡಿದ್ದಾರೆ.
ಇಂದಿನ ಸತ್ಯಾಗ್ರಹದಲ್ಲಿ ಡಾ. ಆಂಜನಪ್ಪ, ಮಾ.ಮುನಿರಾಜು, ನಾಗೇಶ್, ಟಿ.ಜಿ. ಮಂಜುನಾಥ್, ರಾಮಕೃಷ್ಣ, ಲೋಕೇಶ್, ಪ್ರಸನ್ನ ಮತ್ತಿತರರಿದ್ದರು.