ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ (Ghati Subrahmanya Swamy) ತೆಪ್ಪೋತ್ಸವ ಇಂದು (ಜ.23) ಸಂಜೆ 7 ಗಂಟೆಗೆ ನಡೆಯಲಿದೆ.
ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸಮೀಪದ ಕಲ್ಯಾಣಿಯಲ್ಲಿ ನಡೆಯಲಿರುವ ತೆಪ್ಪೋತ್ಸವದಲ್ಲಿ ದೇವರೊಂದಿಗೆ ವಿವಿಧ ಕಲಾ ತಂಡಗಳು, ಮಂಗಳವಾಧ್ಯ ಕಲಾವಿದರು ಭಾಗವಹಿಸಲಿದ್ದಾರೆ.