ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದ ಭಕ್ತನನ್ನು ಎಳೆದೊಯ್ದು ಕೊಂದಿದ್ದ ಚಿರತೆಯನ್ನು (Leopard) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಘಟನೆ ಬಳಿಕ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ತುಂಬಾನೇ ಆತಂಕ ಸೃಷ್ಟಿಯಾಗಿತ್ತು. ಚಿರತೆ ಸೆರೆಗಾಗಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸತತ ನಿಗಾ ವಹಿಸಿದ್ದರು.
ಡೋನ್ ಮೂಲಕ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಗೆ ಕಣ್ಣಾವಲು ವಹಿಸಿದ್ದರು. ಅರವಳಿಕೆ ಕೊಟ್ಟು ಚಿರತೆಯನ್ನು ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.
ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಚಿರತೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಚಿರತೆ ಸೆರೆಯಿಂದ ಯಿಂದ ಭಕ್ತರಲ್ಲಿ ಮನೆಮಾಡಿದ್ದ ಆತಂಕ ನಿವಾರಣೆಯಾಗಿದೆ.
ಇನ್ನೂ ಮೃತನ ಕುಟುಂಬದ ಸದಸ್ಯರಿಗೆ 5 ಲಕ್ಷ ಪರಿಹಾರ ಕೂಡ ಘೋಷಣೆ ಮಾಡಲಾಗಿದೆ.