Astrology: ಶನಿವಾರ, ಜನವರಿ 24, 2026, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ
ಈ ದಿನ ನಿಮ್ಮ ಜೀವನವನ್ನು ಹೆಚ್ಚು ಉತ್ಕೃಷ್ಟಗೊಳಿಸಿ. ಚಿಂತೆಯನ್ನು ಮಾಡಬೇಡಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ. ಅನಾರೋಗ್ಯ ಕಾಣಿಸಿ ಕೊಳ್ಳಬಹುದು. ಆರೋಗ್ಯದ ಕಡೆ ಗಮನ ನೀಡಿ.ಕೆಟ್ಟ ಅಭ್ಯಾಸಗಳನ್ನು ತೊಡೆದು ಹಾಕುವುದು ಒಳ್ಳೆಯದು.
ವೃಷಭ ರಾಶಿ
ಹಣದ ಕೊರತೆಯು ಇಂದು ಕುಟುಂಬದಲ್ಲಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗ ಬಹುದು. ಇಂತಹ ಪರಿಸ್ಥಿತಿಯಲ್ಲಿ ಇತರ ಕುಟುಂಬ ಸದಸ್ಯರೊಂದಿಗೆ ಮಾತನಾಡುವ ಮೊದಲು ಚೆನ್ನಾಗಿ ಯೋಚಿಸಿ ಮತ್ತು ಅವರಿಂದ ಸಲಹೆ ಪಡೆಯಿರಿ.
ಮಿಥುನ ರಾಶಿ
ಅತಿಯಾದ ಹಠ ಒಳ್ಳೆಯದಲ್ಲ. ಒತ್ತಡಗಳಿಗೆ ಮಣಿಯುವ ಸನ್ನಿವೇಶಗಳು ಎದುರಾಗಬಹುದು. ಕುಟುಂಬದ ಸಮಸ್ಯೆಗಳು ಉಲ್ಭಣಗೊಳ್ಳ ಬಹುದು. ಪರಿಸ್ಥಿತಿ ಎದುರಿಸಲು ಸಿದ್ಧರಾಗಿ.
ಕಟಕ ರಾಶಿ
ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗರುವಾಗುತ್ತದೆ. ಸಲಹೆಗಳನ್ನು ಸ್ವೀಕರಿಸಿ. ಇದು ಬಿಕ್ಕಟ್ಟಿನಿಂದ ಹೊರಬರಲು ನಿಮಗೆ ಸಹಾಯ ವಾಗುತ್ತದೆ.
ಸಿಂಹ ರಾಶಿ
ಶೀಘ್ರದಲ್ಲಿ ಅನಿರೀಕ್ಷಿತ ಶುಭ ಸಮಾಚಾರಗಳು ಕೇಳಿ ಬರ ಲಿವೆ.ಸಮಸ್ಯೆಗಳೂ ದೂರಾಗಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವಿದು. ಆದರೆ ಎಲ್ಲಾ ಆಯಾಮಗಳಲ್ಲೂ ಆಲೋಚಿಸಿ, ಸಮಯ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ.
ಕನ್ಯಾ ರಾಶಿ
ಮನಸ್ಸಿ ಗೊಂದಲ ಗಳಿಂದ ಒತ್ತಡ ಎದುರಾಗಬಹುದು. ದೇಹ ವಿಶ್ರಾಂತಿ ಬಯಸಬಹುದು. ಆರೋಗ್ಯ ಕಡೆ ಹೆಚ್ಚಿನ ಗಮನ ಕೊಡಿ. ಇತರರ ಬಗ್ಗೆ ಅತಿಯಾದ ಆಲೋಚನೆಗಳು ಒಳ್ಳೆಯದಲ್ಲ.
ತುಲಾ ರಾಶಿ
ಪತ್ನಿ, ಕುಟುಂಬಸ್ಥ ರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹೊಸ ಕೆಲಸ, ಯೋಜನೆಗಳನ್ನು ಮುಂದೂಡಿ. ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಿ.
ವೃಶ್ಚಿಕ ರಾಶಿ
ಹಣಕಾಸಿನ ವಿಷಯದಲ್ಲಿ ನಿಮ್ಮ ಸ್ವಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಸಾಧ್ಯವಾದಷ್ಟು ಹೆಚ್ಚಿನ ಗಮನವನ್ನು ನೀಡಿ. ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಪ್ಪಂದಗಳ ಮಾಡಿಕೊಳ್ಳಲು ಒತ್ತು ನೀಡಿ.
ಧನಸ್ಸು ರಾಶಿ
ಇಂದು ಹೊಸ ವಾಹನ ಖರೀದಿಸುವ ಲಕ್ಷಣಗಳಿದೆ. ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆದರೆ ಮೊದಲು ಚರ್ಚೆಗಳು ನಡೆಯಬೇಕು. ನೀವು ಇತರರನ್ನು ಸಂಪರ್ಕಿಸದೆ ಮುಂದಕ್ಕೆ ಧಾವಿಸುತ್ತೀರಿ. ಇದರಿಂದ ಮನಸ್ತಾಪಗಳು ಎದುರಾಗಬಹುದು. ಎಚ್ಚರವಿರಲಿ.
ಮಕರ ರಾಶಿ
ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ವಿಚಲಿತರಾಗದಿರಿ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಬರ ಬಹುದು ಕೈಚೆಲ್ಲದಿರಿ. ಸಿಕ್ಕ ಉತ್ತಮ ಸಮಯನ್ನು ಸದ್ಬಳಕೆ ಮಾಡಿಕೊಳ್ಳಿ.
ಕುಂಭ ರಾಶಿ
ಉದ್ವೇಗಕ್ಕೊಳಗಾಗದಿರಿ. ಇಂದಿನ ಗ್ರಹಗತಿಗಳು ನಿಮ್ಮ ರಾಶಿಯ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಒತ್ತಡಗಳು ಎದುರಾದರೂ ಸೂಕ್ತ ರೀತಿಯಲ್ಲಿ ನಿಭಾಯಿಸಲಿದ್ದೀರಿ.
ಮೀನ ರಾಶಿ
ಜೀವನ ಮುಂದಿನ ಹಾದಿಯ ಸ್ಪಷ್ಟ ಚಿತ್ರಣಗಳು ನಿಮಗೆ ತಿಳಿದಿದೆ. ನಿಮ್ಮ ಹಾದಿಯಲ್ಲಿ ಇತರರು ಬರದಂತೆ ನೋಡಿಕೊಳ್ಳಿ. ಗೊಂದಲ ಕ್ಕೊಳಕಾಗದಿರಿ. ದೃಢ ನಿರ್ಧಾರವಿರಲಿ. ಮುಂದೆ ದೊಡ್ಡ ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸಲು ಸಿದ್ಥರಾಗಿರಿ.
ತಿಥಿ: ಷಷ್ಠಿ
ನಕ್ಷತ್ರ: ಉತ್ತರಾಭಾದ್ರ ನಕ್ಷತ್ರ
ರಾಹುಕಾಲ: 09:00AM ರಿಂದ 10:30AM
ಗುಳಿಕಕಾಲ: 06:00AM ರಿಂದ 07:30AM
ಯಮಗಂಡಕಾಲ: 01:30PM ರಿಂದ 03:00PM
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122