ದೊಡ್ಡಬಳ್ಳಾಪುರ: ಬೆಂಗಳೂರಿನ ಬಸವೇಶ್ವರ ನಗರದ ಇನ್ನರ್ ವೀಲ್, ರೋಟರಾಕ್ ಹಾಗೂ ಸುಚೇತನ ಟ್ರಸ್ಟ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಶ್ರೀ ಅರವಿಂದ ಕನ್ನಡ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಸಮವಸ್ತ್ರವನ್ನು ವಿತರಣೆ (Uniforms distributed) ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುಚೇತನ ಟ್ರಸ್ಟ್ ನ ಮಂಜುನಾಥ್ ನಾಗ್, ರೋಟರಾಕ್ ಬೆಂಗಳೂರು ಬಸವೇಶ್ವರ ನಗರದ ಚೇತನ್ ನಾಯ್ಡು, ಇನ್ನರ್ ವೀಲ್ ಬೆಂಗಳೂರು ಬಸವೇಶ್ವರ ನಗರದ ಮಾಜಿ ಅಧ್ಯಕ್ಷರು ಕೋಮತಿ, ಅಧ್ಯಕ್ಷರು ನಯನ, ಕಾರ್ಯದರ್ಶಿ ನಯನ ಹಾಗೂ ಅರವಿಂದ ವಿದ್ಯಾಸಂಸ್ಥೆಯ ಖಜಾಂಚಿ ವೆಂಕಪ್ಪ ಮತ್ತು ಪ್ರಾಂಶುಪಾಲರಾದ ಸರ್ವಮಂಗಳ ಅವರು ಉಪಸ್ಥಿತಿ ಇದ್ದರು.