ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ವೇಳೆ, ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ (Accident) ಸವಾರ ಸಾವನಪ್ಪಿರುವ ಘಟನೆ ನಗರದ ರಾಜ್ಯ ಹೆದ್ದಾರಿ ಕೃಷಿ ಇಲಾಖೆ ಕಚೇರಿ ಸಮೀಪ ಸಂಭವಿಸಿದೆ.
ಮೃತನನ್ನು ಬಿಹಾರ ಮೂಲದ ಸನೋಜ್ ಪಂಡಿತ್ (30 ವರ್ಷ) ಎಂದು ಗುರುತಿಸಲಾಗಿದೆ.
ಮೃತನು ರಾಜಾನುಕುಂಟೆ ನಿವಾಸಿ ಪ್ರಸನ್ನ ಅವರೊಂದಿಗೆ ಗೌರಿಬಿದನೂರಿನಲ್ಲಿರುವ ಜಮೀನಿನಲ್ಲಿ ಕೆಲಸ ಮುಗಿಸಿ, ಮತ್ತೆ ರಾಜಾನುಕುಂಟೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸನೋಜ್ ಸಾವನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.