ಬೆಂಗಳೂರು: ಬಿಎಂಟಿಸಿ ಬಸ್‌ಗೆ (BMTC Bus) ರೈಲು (Train) ನಡುವೆ ಡಿಕ್ಕಿ (Accident) ಹೊಡೆದಿರುವ ಘಟನೆ ಸಾದರಮಂಗಲ ಬಳಿ ಸೋಮವಾರ ನಡೆದಿದೆ.
ರೈಲ್ವೆ ಪ್ಯಾರಲಲ್ ರೋಡ್‌ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಸಾದರಮಂಗಲ ಡಿಪೋ ಬಸ್ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ ಏಕಾಏಕಿ ರೈಲು ಬಂದು ಗುದ್ದಿದ್ದು, ಬಸ್ ಹಿಂಭಾಗ ಜಖಂ ಆಗಿದೆ.
ಗೃಹಿಣಿ ಆತ್ಮಹತ್ಯೆ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಕೀರ್ತಿ ಎಂದು ಗುರುತಿಸಲಾಗಿದೆ.
ಎರಡು ವರ್ಷಗಳ ಹಿಂದೆಯಷ್ಟೇ ಮೃತ ಕೀರ್ತಿ ಅವರು ಗುರುಪ್ರಸಾದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಶವ ಪತ್ತೆಯಾಗಿದೆ.
ಈ ವೇಳೆ ಪತಿ ಗುರುಪ್ರಸಾದ್ ಹಾಗೂ ಪರಿಚಯಸ್ಥರು ಪೋಷಕರಿಗೆ ಮಾಹಿತಿ ನೀಡಿ, ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ತಿಳಿಸಿದ್ದರು.
ಮೃತಳ ಪೋಷಕರ ಮಾಹಿತಿ ಪ್ರಕಾರ, ಕೈತುಂಬ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಆದರೂ ಕೂಡ ಕಳೆದ ಎರಡು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಇದೆಲ್ಲವನ್ನು ಕೀರ್ತಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದು, ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ ಮೃತಳ ಕುಟುಂಬಸ್ಥರು ಆಕೆಯ ಪತಿ ಗುರುಪ್ರಸಾದ್ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.