ದೊಡ್ಡಬಳ್ಳಾಪುರ: ಮೇಲ್ದರ್ಜೆಗೆರಿದ ಬಳಿಕ ಇತ್ತೀಚೆಗಷ್ಟೇ ಮೊದಲ ಬಾರಿಗೆ ತೀವ್ರ ಜಿದ್ದಾಜಿದ್ದಿಯಿಂದ ನಡೆದಿದ್ದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ (Bashettihalli town panchayat) ಚುನಾವಣೆ ಬಳಿಕ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಬೆಳಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಲು ಸಮಯ ನಿಗದಿ ಪಡಿಸಲಾಗಿದೆ.
1 ಗಂಟೆಗೆ ಚುನಾವಣೆ ಸಭೆ ಆರಂಭವಾಗಲಿದ್ದು, 1.15 ರಿಂದ 1.30ರ ವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ.
ನಾಮಪತ್ರ ಹಿಂಪಡೆಯಲು 1.30 ರಿಂದ 2
ಗಂಟೆಯವರೆಗೆ ಸಮಯ ನೀಡಿದ್ದು, ಬಳಿಕ ಅಗತ್ಯವಿದ್ದಲ್ಲಿ 2 ಗಂಟೆ ಬಳಿಕ ಚುನಾವಣೆ ನಡೆಯಲಿದೆ.
ಇತ್ತೀಚೆಗೆ ನಡೆದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 19 ವಾರ್ಡ್ಗಳಲ್ಲಿ ಬಿಜೆಪಿ 14 ರಲ್ಲಿ ಜಯಗಳಿಸಿದೆ. ಉಳಿದಂತೆ ಕಾಂಗ್ರೆಸ್ ಮೂರು ಸ್ಥಾನ, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
ಬಿಜೆಪಿಗೆ ಅಧಿಕಾರ ನಿಶ್ಚಿತ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ 19 ಸ್ಥಾನಗಳಲ್ಲಿ 14 ಸ್ಥಾನ ಗೆದ್ದಿರುವ ಬಿಜೆಪಿಗೆ ಅಧಿಕಾರ ಬಹುತೇಕ ಖಚಿತವಾಗಿದೆ. ಮೂಲಗಳ ಮಾಹಿತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಪ್ರೇಮ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ನಡುವೆ ತೀವ್ರ ಸ್ಪರ್ಧೆಯಿದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಬೆಂಬಲ ನೀಡುವುದೋ ಕಾದು ನೋಡಬೇಕಿದೆ.
ಇನ್ನೂ ಬಹುಮತ ಹೊಂದಿರದ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಪರ್ಧೆ ಮಾಡುವ ಪ್ರಯತ್ನ ಮಾಡುತ್ತವೆಯೇ ಎಂಬುದು ಖಚಿತವಾಗಿಲ್ಲ.