ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು.

ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 13 ಮಂದಿ ಸದಸ್ಯರನ್ನು ಹೊಂದಿದ್ದು, ಚುನಾವಣೆ ಅಧಿಕಾರಿ ನಾಗಮಣಿ ಕೆ.ಎನ್ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚೆಲುವರಾಜು ಹೆಚ್.ಎಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಚೆಲುವರಾಜ್ ಅವರನ್ನು ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ವಿಶ್ವನಾಥರೆಡ್ಡಿ, ಮುಖಂಡರಾದ ಅಣ್ಣಯ್ಯಪ್ಪ, ಜಯರಾಮ್, ವೆಂಕಟೇಶಪ್ಪ, ಓಜೇನಹಳ್ಳಿ ಕಿಟ್ಟಿ, ನರಸಿಂಹ ಮೂರ್ತಿ, ನಿರ್ದೇಶಕರಾದ ಶಶಿ ಕುಮಾರ, ಚಂದ್ರ ಮೋಹನ್, ಬಾಲಕೃಷ್ಣ ರೆಡ್ಡಿ , ಮಂಜುನಾಥ, ರಾಮಕೃಷ್ಣಪ್ಪ ಗಾಯಿತ್ರಿ ಮತ್ತಿತರರು ಶುಭಕೋರಿದ್ದಾರೆ.