ದೊಡ್ಡಬಳ್ಳಾಪುರ: ಕುಚ್ಚಪ್ಪನಪೇಟೆ ನಿವಾಸಿ ಶಿವರಾಜ್ ಕುಮಾರ್ ಡಿ.ಎಲ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಡಾಕ್ಟರೇಟ್ ಪದವಿ (PHD) ಪಡೆದಿದ್ದಾರೆ.
ಬೆಂಗಳೂರಿನ ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾ ವಿದ್ಯಾಲಯ ವ್ಯಾಸಂಗ ಮಾಡುತ್ತಿರುವ ಶಿವರಾಜ್ ಕುಮಾರ್ ಅವರು, ಉಪನ್ಯಾಸಕರಾದ ಡಾ.ಎಂ.ಎಸ್. ಬಸವರಾಜು ಅವರ ಮಾರ್ಗದರ್ಶನದಲ್ಲಿ ಗಣಿತಶಾಸ್ತ್ರದ ಅನ್ವಯ ಕ್ಷೇತ್ರದಲ್ಲಿ ರಚಿಸಿದ “Effect of Cross Flow on the Hydrodynamic and Hydromagnetic Stability of Shear Flows Through the Porous Media” ಪ್ರಬಂಧಕ್ಕೆ ಪಿಹೆಚ್‌ಡಿ ದೊರೆತಿದೆ.
ಪಿಹೆಚ್‌ಡಿ ಪಡೆದು ಶೈಕ್ಷಣಿಕ ಸಾಧನೆ ಮಾಡುವ ಮೂಲಕ ದೊಡ್ಡಬಳ್ಳಾಪುರ ತಾಲೂಕಿನ ಕೀರ್ತಿ ಹೆಚ್ಚಿಸಿರುವ ಶಿವರಾಜ್ ಕುಮಾರ್ ಅವರಿಗೆ ಕುಟುಂಬದ ಸದಸ್ಯರು, ಮಿತ್ರರು, ಸಹೋದ್ಯೋಗಿಗಳು ಹಾಗೂ ಶೈಕ್ಷಣಿಕ ಕ್ಷೇತ್ರದ ಗಣ್ಯರು ಶುಭಕೋರಿದ್ದಾರೆ.