ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ (R.L. Jalappa) ತಾಂತ್ರಿಕ ಮಹಾವಿದ್ಯಾಲಯ ಯಾಂತ್ರಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ. ಟಿ. ಎಚ್ (Lakshminarayana. T. H.) ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಡಾಕ್ಟರೇಟ್ ಪದವಿ (Ph.D) ದೊರೆತಿದೆ.
ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಯಾಂತ್ರಿಕ ವಿಭಾಗದ ಪ್ರೋಫೇಸರ್ ಡಾ.ಎಂ. ಶ್ರೀನಿವಾಸ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೀನಾರಾಯಣ ಮಂಡಿಸಿದ “DEVELOPMENT AND CHARACTERISATION OF AL-MG-SI REINFORCED WITH GR.-TIC PARTICULATE HYBRID COMPOSITES” ಪ್ರಬಂಧಕ್ಕೆ ಪಿಹೆಚ್‌ಡಿ ದೊರೆತಿದೆ.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಜಿ.ಹನುಮಂತರಾಜು ಮತ್ತು ಶಾರದಮ್ಮ ಅವರ ಪುತ್ರನಾದ ಲಕ್ಷ್ಮೀನಾರಾಯಣ ಟಿ ಎಚ್ ಅವರು, ನಗರದ ಆರ್.ಎಲ್. ಜಾಲಪ್ಪ ತಾಂತ್ರಿಕ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ, ಪ್ರೋಫೇಸರ್ ಡಾ.ಎಂ. ಶ್ರೀನಿವಾಸ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ರಚಿಸಿ, ಪಿಹೆಚ್‌ಡಿ ಪಡೆದಿದ್ದಾರೆ.