ದೊಡ್ಡಬಳ್ಳಾಪುರ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ಯಾರನ್ನೂ ಓಲೈಕೆ ಮಾಡದೇ ಎಲ್ಲಾ ವರ್ಗದವರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಮಾಡಲಾಗಿದೆ. ಕಾಂಗ್ರೆಸ್ ಬಜೆಟ್ ಮಾಡಿದ್ದರೆ ತಾರತಮ್ಯ ಹಾಗೂ ಓಲೈಕೆ ಕಾಣಬಹುದಾಗಿತ್ತು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ನಗರದ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಸ್ಲಿಂ ಸಮುದಾಯಕ್ಕೆ ಸಾಲದ ಬಡ್ಡಿಯನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದ್ದು, ಇದು ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಗುರಿಯಾಗಿರಿಸಿಕೊಂಡಿದೆ. ಬಿಜೆಪಿಗೆ ಅಲ್ಪ ಸಂಖ್ಯಾತರ ಮೇಲೆ ಕಾಳಜಿ ಇಲ್ಲ ಎಂದಲ್ಲ. ಆದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ ಎಂದರು.
ಈ ಸಾಲಿನಲ್ಲಿ 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಸಾರಿಗೆ ಹಾಗೂ ರಕ್ಷಣಾ ಇಲಾಖೆಗೆ ಅತಿಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಇಲಾಖೆಗೂ ಹೆಚ್ಚು ಒತ್ತು ನೀಡಲಾಗಿದೆ. ಯಾವ ಬೆಲೆ, ತೆರಿಗೆ ಹೆಚ್ಚು ಕಡಿಮೆ ಮಾಡಿಲ್ಲ ಜನರಿಗೆ ಸೌಕರ್ಯ ನೀಡಲು ಒತ್ತು ನೀಡಿದ್ದಾರೆ. ಹೊಂದಿದ್ದೇವೆ. ನುಡಿದಂತೆ ನಡೆದಂತೆ ಬಜೆಟ್ ಮಂಡಿಸಲಾಗಿದೆ. ಆರ್ಥಿಕತೆಯಲ್ಲಿ 4 ನೇ ಸ್ಥಾನದಲ್ಲಿರುವ ನಮ್ಮ ದೇಶ 2027ಕ್ಕೆ ಅಭಿವೃದ್ದಿ ಹೊಂದಿದ ದೇಶವಾಗಲಿದೆ ಎಂದರು.
ಕಂಟಿನ್ಯೂಟಿ, ಕ್ರೆಡಿಬಲ್, ಕಮಿಟ್ ಮೆಂಟ್ಗಳನ್ನು ಹೊಂದಿರುವ ಬಜೆಟ್‌ನಲ್ಲಿ ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಮತ್ತು ಕೌಶಲ್ಯಕ್ಕಾಗಿ ಸಮರ್ಥ್ 20 ಸೇರಿದಂತೆ ಸಮಗ್ರ ಯೋಜನೆಯನ್ನು ಘೋಷಿಸಲಾಗಿದೆ. ಕೌಶಲ್ಯ ಇಲ್ಲದಿದ್ದರೆ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಎಂಎಸ್‌ಎಂಇ ಅಭಿವೃದ್ಧಿ ಮೂಲಕ ಕೌಶಲಕ್ಕೆ ಒತ್ತು ನೀಡಲಾಗಿದೆ. ಗಾಂಧೀಜಿ ಹೆಸರುಹೇಳುವ ಕಾಂಗ್ರೆಸ್‌ನಲ್ಲಿ ಖಾದಿ ಹಾಕುವವರಿಲ್ಲ.
ಕಾಂಗ್ರೆಸ್ ಸಂವಿಧಾನದಲ್ಲಿ ಪಾನಮತ್ತರಿಗೆ ಕಾಂಗ್ರೆಸ್ ನಲ್ಲಿ ಅವಕಾಶವಿಲ್ಲವೆನ್ನುತ್ತಾರೆ. ಆದರೆ ಆ ಪಕ್ಷದಲ್ಲೇ ಪಾನಪ್ರಿಯರಿದ್ದಾರೆ. ಕಾಂಗ್ರೆಸ್ ಅವರಿಗೆ ಕುಡಿದಿಲ್ಲ ಎಂದರೆ ರಾತ್ರಿ ನಿದ್ದೆ ಬರಲ್ಲ ಒಂದು ದಿನನೂ ರಾಹುಲ್ ಗಾಂಧಿ ಖಾದಿ ಹಾಕಿಲ್ಲ ಗಾಂಧಿ ತತ್ವಗಳ ವಿರುದ್ಧ ಕಾಂಗ್ರೆಸ್ ಇದೆ. ಕಾಂಗ್ರೆಸ್ ನಲ್ಲಿ ಸ್ಟೀಮ್ ಗಳು ಇಲ್ಲ ಬರೀ ಸ್ಪ್ಯಾಮ್ ಇವೆ. ಮಹಾತ್ಮಗಾಂಧಿ ಹೆಸರಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಹಿಂದುಗಳನ್ನು ರಾಮನನ್ನ ಕಂಡರೆ ಕಾಂಗ್ರೆಸ್ಗೆ ಆಗಲ್ಲ ಯೋಜನೆಗಳಿಗೆ ಮುಸ್ಲಿಂ ಹೆಸರನ್ನ ಇಟ್ಟಿದ್ದರೆ ಬಂದು ಅಪ್ಪಿ ಕೊಳ್ಳುತ್ತಿದ್ದರು ಎಂದರು.
ಬದಲಾದ ಮನ್ರೇಗಾ
ಮನ್ರೆಗಾ ಯೋಜನೆಯಲ್ಲಿ ಹಿಂದೆ ಇದ್ದ ಯಾಂತ್ರಿಕ ಬಳಕೆ, ಬಿಲ್‌ಗಳಲ್ಲಿ ವಂಚನೆ ಮೊದಲಾದ ಭ್ರಷ್ಟಾಚಾರವನ್ನು ತಡೆಯುವ ಸಲುವಾಗಿ ವಿಬಿ-ಜಿರಾಮ್ ಜಿ ಹೆಸರಿನಲ್ಲಿ ಯೋಜನೆಯನ್ನು ಪರಿಷ್ಕರಿಸಲಾಗಿದ್ದು, ರಾಜ್ಯದ ಕಾಂಗ್ರೆಸ್ ಮುಖಂಡರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ.
ಹಿಂದಿನ ಯುಪಿಎ ಸರ್ಕಾರ ಮನ್ರೆಗಾ ಯೋಜನೆ ಹೆಸರಿಸುವುದಕ್ಕೂ ಮುನ್ನ ಬೇರೆ ಹೆಸರುಗಳನ್ನು ಇರಿಸಿದ್ದರು. ಕೇಂದ್ರ ಸರ್ಕಾರ ಜಿ ರಾಮ್ ಜಿ ಯೋಜನೆಯಲ್ಲಿ 15 ದಿನಗಳೊಳಗಾಗಿ ಹಣ ಪಾವತಿ, ಬಯೋಮೆಟ್ರಿಕ್ ವ್ಯವಸ್ಥೆ, 125 ದಿನಗಳಿಗೆ ಕೆಲಸದ ದಿನಗಳ ಹೆಚ್ಚಳ ಮೊದಲಾಗಿ ಪರಿಷ್ಕರಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಕುರಿತು ಹೋರಾಟ ರೂಪಿಸಲಾಗುವುದು ಎಂದರು.
ಮುಖ್ಯಮಂತ್ರಿ ಗೊಂದಲ
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿ ಸ್ಥಾನ ಗೊಂದಲಕ್ಕೆ ಹೈಕಮಾಂಡೇ ನೇರ ಕಾರಣ ಎಂದು ಆರೋಪಿಸಿದರು.
ಕಪ್ಪಕಾಣಿಕೆಗಾಗಿ ಹೈಕಮಾಂಡ್ ಈ ಎಲ್ಲ ಆಟಗಳನ್ನು ಆಡಿಸುತ್ತಿದೆ. ನಾಕೊಡೆ ನಿ ಬಿಡೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಹೈಕಮಾಂಡ್” ಎಂದು ಕಿಡಿಕಾರಿದರು.
ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತಾ ಇಲ್ಲವಾ ಎಂಬುದರ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡುತ್ತಿಲ್ಲ ಈ ಕಡೆ ಇವರನ್ನು ಛೂ ಬಿಡ್ತಾರೆ, ಆ ಕಡೆ ಅವರನ್ನ ಛೂ ಬಿಡ್ತಾರೆ. ಎರಡೂ ಕಡೆಯಿಂದ ಬಂಡವಾಳ ಮಾಡಿಕೊಳ್ಳಲಾಗುತ್ತಿದೆ. ಮೆಟ್ರೋ ದರ ಏರಿಕೆಗೂ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಖಜಾನೆ ತುಂಬಿಸಲು ಹಣ ಬೇಕಾಗಿದೆ ಎಂದು ಹೇಳಿದರು.
ಒಟ್ಟಾರೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನತೆಗೆ, ಕರ್ನಾಟಕ ರಾಜ್ಯಕ್ಕೆ ಯಾವುದೇ ಯೋಜನೆ ಘೋಷಿಸಿಲ್ಲ ಎಂಬ ಆಕ್ರೋಶಕ್ಕೆ ಸುದ್ದಿಗೋಷ್ಠಿಗಳ ಮೂಲಕ ತೇಪೆ ಹಚ್ಚಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ವ್ಯಾಪಕವಾಗಿದೆ.