ದೊಡ್ಡಬಳ್ಳಾಪುರ: ಬೆಂಗಳೂರಿನ ಯಶವಂತಪುರದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಹೆಜ್ಜಾಜಿಗೆ ನೂತನ ಬಿಎಂಟಿಸಿ (BMTC) ಬಸ್ ಸಂಚಾರ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ಮಧುರೆ, ದೊಡ್ಡಹೆಜ್ಜಾಜಿ, ದೊಡ್ಡಬೆಳವಂಗಲ, ಸಾಸಲು ಮತ್ತು ಆರೂಢಿ ವ್ಯಾಪ್ತಿಯ ಗ್ರಾಮಗಳಿಗೆ ಬಸ್ಸಿನ ಸಮಸ್ಯೆ ತೀವ್ರವಾಗಿದೆ.
ಆರಂಭಿಕವಾಗಿ ದೊಡ್ಡಹೆಜ್ಜಾಜಿ ವರೆಗೂ ಬಿಎಂಟಿಸಿ ಬಸ್ ಸಂಚಾರ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡಬೆಳವಂಗಲ, ಸಾಸಲು ಮತ್ತು ಆರೂಢಿಗೂ ಈ ಮಾರ್ಗದಲ್ಲಿ ಬಸ್ಸುಗಳು ಸಂಚಾರ ಆರಂಭವಾಗುವ ವಿಶ್ವಾಸವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮುಖಂಡರಾದ ಸ್ವಾಮಿಗೌಡ, ಗೋಪಿ ನಾಥ್, ಕೃಷ್ಣಮೂರ್ತಿ ಮತ್ತಿತರರಿದ್ದರು.