ದೊಡ್ಡಬಳ್ಳಾಪುರದಲ್ಲಿ ಪುಂಡರ ಹಾವಳಿ, ಸ್ವಚ್ಚತೆ ಕೊರತೆ.. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ದೂರು

Lack of cleanliness in Doddaballapur.. Complaint to the Chairman of the State Child Protection Commission

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಠಿಯಾಗಬೇಕು. ಹಾಗೂ ಸಮಾಜದಲ್ಲಿ ಪ್ರತಿಯೊಂದು ಮಗು ಅತ್ಯಂತ ಗೌರವ ಪೂರ್ವಕ, ಘನತೆಯಿಂದ ಜೀವಿಸುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ರಕ್ಷಣೆ ಹಕ್ಕು ಮತ್ತು ಭಾಗವಹಿಸುವಿಕೆ ಹಕ್ಕುಗಳನ್ನು ಹೊಂದಿರುತ್ತಾರೆ. ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದಾಗ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಇತ್ಯರ್ಥ್ಯಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ (State Child Protection Commission) ಅಧ್ಯಕ್ಷರಾದ ಶಶಿಧರ್‌ ಕೋಸಂಬೆ ಅವರು ಹೇಳಿದರು.

ನಗರಸಭೆ ದೊಡ್ಡಬಳ್ಳಾಪುರ, ಯುವ ಸಂಚಲನ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಡಿ ಪಟ್ಟಣದ ನಗರಸಭೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ವಿಶೇಷ ನಗರಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಜೀವಿಸುವ ಪರಿಸರದ ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಭೆ ಆಯೋಜಿಸಲಾಗಿತ್ತು. ಮಕ್ಕಳ ಹಕ್ಕುಗಳ ಸಮಸ್ಯೆ ಆಲಿಸಲು ಈ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಗ್ರಾಮಸಭೆ ಮಾಡಲಾಗುತ್ತಿತ್ತು. ನಗರ ಮಟ್ಟದಲ್ಲಿಯೂ ಮಕ್ಕಳು ಸಮಸ್ಯೆಗಳ ಆಗರದಲ್ಲಿ ಜೀವಿಸುತ್ತಾ ಇರುವದರಿಂದ ನಗರ ಪ್ರದೇಶಗಳಲ್ಲಿ ಮಕ್ಕಳ ವಿಶೇಷ ನಗರಸಭೆ ವಿನೂತನ ಕಾರ್ಯವಾಗಿದೆ. ಘನ ಸರ್ಕಾರಕ್ಕೆ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಮಕ್ಕಳ ವಿಶೇಷ ನಗರಸಭೆ ಆಯೋಜನೆಯ ಕುರಿತು ಸುತ್ತೋಲೆ ಹೊರಡಿಸುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಶಾಲೆಗಳಲ್ಲಿನ ಶೌಚಾಲಯ, ಸ್ವಚ್ಛತೆ, ನೈರ್ಮಲ್ಯ, ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಕೊರತೆ, ವಿದ್ಯುತ್‌, ನೀರು ಸರಬರಾಜು, ಸೇರಿದಂತೆ ಕೌಟುಂಬಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಆಯೋಗದ ಮುಂದೆ ತೋಡಿಕೊಂಡಿದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ನೀಡಿ, ಒಂದು ವಾರದೊಳಗೆ ಅನುಪಾಲನ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಅರಳು ಮಲ್ಲಿಗೆ ಬಾಗಿಲು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಕಸ ಸಂಗ್ರಹಣೆಯಾಗುತ್ತಿದ್ದು, ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ ಹಾಗೂ ಶಾಲೆ ಪಕ್ಕದಲ್ಲೇ ಚರಂಡಿ ಇದ್ದು, ಕಲ್ಮಶ ನೀರು ಶಾಲಾವರಣಕ್ಕೆ ನುಗ್ಗಿ ದುರ್ನಾತ ಬರುತ್ತಿದ್ದು, ತುಂಬಾ ಸಮಸ್ಯೆ ಎದುರಾಗುತ್ತದೆ ಎನ್ನುವ ಮಕ್ಕಳ ಪ್ರಶ್ನೆ ಪ್ರತ್ಯುತ್ತರ ನೀಡಿದ ಆಯೋಗದ ಅಧ್ಯಕ್ಷರು ನಗರಸಭೆಯ ಪೌರಾಯುಕ್ತರಿಗೆ ತುರ್ತಾಗಿ ಬಿಇಓ ಮತ್ತು ಪಟ್ಟಣದ ಎಲ್ಲಾ ಶಾಲೆಯ ಮುಖ್ಯಗುರುಗಳೊಂದಿಗೆ ಸಭೆ ಏರ್ಪಡಿಸಿ, ಕಸ ವಿಲೇವಾರಿ, ಶಾಲೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಇತರೆ ತೊಂದರೆಗಳ ಕುರಿತು ಚರ್ಚಿಸಿ, ಸಭೆಯ ಅನುಪಾಲನ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ದೊಡ್ಡಬಳ್ಳಾಪುರದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಶೌಚಾಲಯವಿದ್ದು, ಇಲ್ಲದಂತಾಗಿದೆ. ಶುಚಿಯಾದ ಆಹಾರ ಪೂರೈಕೆಯಾಗುತ್ತಿಲ್ಲವೆಂದು ಅಳಲು ತೋಡಿದ ಮಕ್ಕಳು. ಇದಕ್ಕೆ ಪ್ರತಿಕ್ರಿಯಿಸ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಸಮಾಲೋಚಿಸಿ, ನಿಮ್ಮ ಶಿಕ್ಷಣ ಇಲಾಖೆಗೆ ಒಳಪಡುವ ಶಾಲೆಗಳಲ್ಲಿನ ಸಮಸ್ಯೆಗಳನ್ನು ಅವಲೋಕಿಸಿ, ಸರ್ಕಾರಿ ಸೌಲಭ್ಯ, ಕೊಠಡಿ, ಶೌಚಾಲಯ, ಶಿಕ್ಷಕರ ಕೊರತೆ, ಶುಚಿಯಾದ ಆಹಾರ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪಟ್ಟಿಮಾಡಿ, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮವಹಿಸಿ ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಪಟ್ಟಣದ ಬಹುತೇಕ ಶಾಲಾ-ಕಾಲೇಜು ಆವರಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಧೂಮಪಾನ, ಮಧ್ಯಪಾನ, ಶಾಲಾ ಆಸ್ತಿ-ಪಾಸ್ತಿ ನಾಶಗೊಳಿಸುವಿಕೆ ಹಾಗೂ ಅನೈತಿಕ ಚಟುವಟಿಕೆಗಳು ಮರುಕಳಿಸುತ್ತಿರುವ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಆಯಾ ಶಾಲೆಗೆ ಸಂಬಂಧಿಸಿದ ಪೊಲೀಸ್‌ ಸಿಬ್ಬಂದಿ ಪ್ರತಿದಿನ ಬೀಟ್‌ ಮೂಲಕ ಶಾಲಾ-ಕಾಲೇಜು ಆವರಣಗಳಲ್ಲಿ ದುರ್ಘಟನೆಗಳು ಸಂಭವಿಸದಂತೆ ನಿಗಾವಹಿಸಲು ಆಯೋಗದ ಅಧ್ಯಕ್ಷರು ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

ಮಕ್ಕಳ ರಕ್ಷಣಾ ನೀತಿ-2016ರ ಅನ್ವಯ ಶಾಲೆಯಲ್ಲಿ ಸಲಹಾ/ದೂರು ಪೆಟ್ಟಿಗೆ ಅಳವಡಿಸುವುದು, ಮಕ್ಕಳ ಸಹಾಯವಾಣಿ 1098 ಶಾಶ್ವತ ಗೋಡೆ ಫಲಕ, ಕೋಪ್ಟಾ ಕಾಯ್ದೆ-2003ರ ಅನ್ವಯ ಶಾಲಾ ಆವರಣದಲ್ಲಿ 100 ಮೀಟರ್‌ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧ ಕಾಯ್ದೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪೊಲೀಸ್‌ ಇಲಾಖೆಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ಕರ್ತವ್ಯ ನಿಷ್ಠೆಯಿಂದ ಜಂಟಿಯಾಗಿ ಕಾರ್ಯ ನಿರ್ವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧರಾಗಬೇಕು ಎಂದು ತಿಳಿಸಿದರು.

ಶಾಲೆ ಮಗು ತಮ್ಮ ಶಾಲೆಯೆ ಇಬ್ಬರು ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಬಾಲ್ಯ ವಿವಾಹ ಮಾಡಿದ್ದ ಮಾಹಿತಿ ಪಡೆದ ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿ, ಬಾಲ್ಯ ವಿವಾಹ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸದ ಪ್ರತಿಯೊಬ್ಬರೂ ಅಪರಾಧಿಗಳಾಗಿರುತ್ತಾರೆ. ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳಬೇಕು ಎಂದು ಸೂಚಿಸಿದರು.

ಪಟ್ಟಣದ ಡಾ.ಬಿ.ಆರ್‌ ಅಂಬೇಡ್ಕರ್‌ ಬಾಲಕೀಯರ ವಸತಿ ನಿಲಯದಲ್ಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಮತ್ತು ವಿದ್ಯಾರ್ಥಿನಿಯರಿಗೆ ವಿತರಿಸುವ ಸ್ಯಾನಿಟರ್‌ ಪ್ಯಾಡ್‌ ಸಕಲಾಕ್ಕೆ ಶುಭ್ರತೆಯಿಂದ ನೀಡಿ ಎಂದ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಮ್ಮ, ಪೌರಾಯುಕ್ತ ಕಾರ್ತೀಕ್ ಈಶ್ವರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ವಾಸುದೇವ ಶರ್ಮಾ, ಪ್ರಭುದೇವ, ಚಿದಾನಂದ ಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ರಾಜಕೀಯ

ಜನರ ಸಮಸ್ಯೆಗೆ ದನಿಯಾಗಿದ್ದ ರಾಘವ್ ಚಡ್ಡಾಗೆ ಆಪ್ ಶಾಕ್..!

ಜನರ ಸಮಸ್ಯೆಗೆ ದನಿಯಾಗಿದ್ದ ರಾಘವ್ ಚಡ್ಡಾಗೆ ಆಪ್ ಶಾಕ್..!

ಜನಪರ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಪ್ರಶ್ನಿಸುವ ಮೂಲಕ ಮೋದಿ (Modi) ಸರ್ಕಾರದ ವಿರುದ್ದ ಗುಡುಗುತ್ತಿದ್ದ ಆಮ್ ಆದ್ಮಿ ಪಕ್ಷದ (APP) ಸಂಸದ ರಾಘವ್ ಚಡ್ಡಾ (Raghav Chadha) ಅವರ ರೆಕ್ಕೆ ಕತ್ತರಿಸುವ ಕೆಲಸವನ್ನು ತನ್ನದೇ ಪಕ್ಷ

[ccc_my_favorite_select_button post_id="120655"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆ (Marriage) ಮಾಡಿಲ್ಲವೆಂದು ಜಗಳ ತಗೆದ ಮಗ (Son) ಸ್ವಂತ ತಾಯಿಯನ್ನೇ (Mother) ಹೊಡೆದು ಕೊಂದಿರುವ (Murder) ಘಟನೆ ವರದಿಯಾಗಿದೆ.

[ccc_my_favorite_select_button post_id="120643"]
ದೊಡ್ಡಬಳ್ಳಾಪುರ: ಅಪಘಾತ.. ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಆಕ್ರೋಶ..!

ದೊಡ್ಡಬಳ್ಳಾಪುರ: ಅಪಘಾತ.. ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಆಕ್ರೋಶ..!

ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ (Accident) ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ಹಿಂದೂಪುರ- ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿ ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="120640"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]