ಮಹಾಶಿವರಾತ್ರಿಯಂದು ಸದ್ಗುರು ಸನ್ನಿಧಿಯಲ್ಲಿ ಹರಿದ ಭಕ್ತಿಯ ಸಾಗರ

An ocean of devotion flowed in the presence of Sadhguru on Mahashivratri.

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿಯನ್ನು (Mahashivratri) ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲು ಚಿಕ್ಕಬಳ್ಳಾಪುರ ಸದ್ಗುರು ಸನ್ನಿಧಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು.

ಮಹಾಶಿವರಾತ್ರಿಯಂದು ಸದ್ಗುರು ಸನ್ನಿಧಿಯಲ್ಲಿ ಹರಿದ ಭಕ್ತಿಯ ಸಾಗರ

ಬೆಳಿಗ್ಗೆ 6 ಗಂಟೆಯಿಂದಲೇ ಹತ್ತಾರು ಸಾವಿರ ಭಕ್ತರು ಮತ್ತು ನೂರಾರು ಸ್ವಯಂಸೇವಕರು ಆದಿಯೋಗಿ ಮತ್ತು ಯೋಗೇಶ್ವರ ಲಿಂಗ ದೇವಸ್ಥಾನಕ್ಕೆ ಶಿವನ ಅನುಗ್ರಹ ಪಡೆಯಲು ಭೇಟಿ ನೀಡುತ್ತಿದ್ದರು. ಇದರಿಂದಾಗಿ ಯೋಗದ್ವಾರದಿಂದ ಸದ್ಗುರು ಸನ್ನಿಧಿಯವರೆಗೆ 3 ಕಿ.ಮೀ ಉದ್ದದ ಸಾಲು ಕಂಡುಬಂದಿತು.

2026ರ ಮಹಾಶಿವರಾತ್ರಿ ಪ್ರಯುಕ್ತ, ಫೆಬ್ರವರಿ 14 ರಿಂದ 16 ರವರೆಗಿನ ಮೂರು ದಿನಗಳಲ್ಲಿ ಚಿಕ್ಕಬಳ್ಳಾಪುರದ ಆದಿಯೋಗಿ ಮತ್ತು ಆಶ್ರಮಕ್ಕೆ ಹತ್ತಾರು ಸಾವಿರ ಜನರು ಭೇಟಿ ನೀಡುವ ಮೂಲಕ ಅಭೂತಪೂರ್ವ ಭಕ್ತಿಯ ಪ್ರವಾಹಕ್ಕೆ ಸಾಕ್ಷಿಯಾದರು. ಇದರಲ್ಲಿ ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯರು, ಬೆಂಗಳೂರಿನಿಂದ ಆಗಮಿಸಿದ ಭಕ್ತರು ಹಾಗೂ ದೇಶ-ವಿದೇಶಗಳ ಪ್ರವಾಸಿಗರು ಸೇರಿದ್ದರು.

ಮಹಾಶಿವರಾತ್ರಿಯಂದು ಸದ್ಗುರು ಸನ್ನಿಧಿಯಲ್ಲಿ ಹರಿದ ಭಕ್ತಿಯ ಸಾಗರ

ಭಕ್ತರಿಗೆ ಮಹಾಶಿವರಾತ್ರಿಯ ಅವಿಸ್ಮರಣೀಯ ಅನುಭವವನ್ನು ನೀಡಲು ಮತ್ತು ಜನಸಂದಣಿಯನ್ನು ನಿರ್ವಹಿಸಲು ನೂರಾರು ಈಶ ಸ್ವಯಂಸೇವಕರು, ದೊಡ್ಡ ಸಂಖ್ಯೆಯ ಪೊಲೀಸರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್‌ಗಳೊಂದಿಗೆ ಕೈಜೋಡಿಸಿದರು.

ಭಕ್ತರು ಯೋಗೇಶ್ವರ ಲಿಂಗಕ್ಕೆ ಕ್ಷೀರಾಭಿಷೇಕ, ಬಿಲ್ವ ಪತ್ರೆ, ಪುಷ್ಪಗಳು, ತೆಂಗಿನಕಾಯಿ ಮತ್ತು ದೀಪಗಳ ಅರ್ಪಣೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದರು. ಇದರ ಜೊತೆಗೆ, ತನ್ನ ಪ್ರಭುವಿನೆಡೆಗಿನ ಭಕ್ತಿಗೆ ನಿಶ್ಚಲ ಸಾಕ್ಷಿಯಾದ 21 ಅಡಿಯ ಭವ್ಯ ನಂದಿಗೆ ತೈಲ ಅರ್ಪಣೆಯನ್ನು ಸಹ ಮಾಡಿದರು.

ಈ ವರ್ಷದ ಮಹಾಶಿವರಾತ್ರಿ ನೇರಪ್ರಸಾರವು ಸೈನ್ ಲ್ಯಾಂಗ್ವೇಜ್ (ಸಂಕೇತ ಭಾಷೆ) ನಲ್ಲಿಯೂ ಲಭ್ಯವಿತ್ತು. ಇದರಿಂದಾಗಿ ಶ್ರವಣದೋಷವುಳ್ಳವರು ಸಹ ವಿಶ್ವದಾದ್ಯಂತದ ಲಕ್ಷಾಂತರ ಜನರೊಂದಿಗೆ ಈ ಪವಿತ್ರ ರಾತ್ರಿಯ ಅನುಭವ ಪಡೆಯಲು ಸಾಧ್ಯವಾಯಿತು.

ಸಾವಿರಾರು ಜನರ ಹರ್ಷೋದ್ಗಾರದ ನಡುವೆ ಆದಿಯೋಗಿ ದಿವ್ಯ ದರ್ಶನವು ಅನಾವರಣಗೊಂಡಿತು. ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ, ನೇರಪ್ರಸಾರದ ಮೂಲಕ ಈಶ ಯೋಗ ಕೇಂದ್ರದ ಆಚರಣೆಗಳಲ್ಲಿ ಭಕ್ತರು ಸಂಭ್ರಮದಿಂದ ಭಾಗವಹಿಸಿದರು.

ಈಶ ಯೋಗ ಕೇಂದ್ರದ ಆದಿಯೋಗಿಯ ಸಮ್ಮುಖದಲ್ಲಿ ಸದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಶಕ್ತಿಯುತ ಮಧ್ಯರಾತ್ರಿಯ ಧ್ಯಾನದಲ್ಲಿ ಭಕ್ತರು ಪಾಲ್ಗೊಂಡಿದ್ದರಿಂದ, “ಓಂ ನಮಃ ಶಿವಾಯ” ಎಂಬ ಮಹಾಮಂತ್ರವು ಇಡೀ ರಾತ್ರಿಯ ವಾತಾವರಣವನ್ನು ಆವರಿಸಿತ್ತು.

ಈಶ ಯೋಗ ಕೇಂದ್ರದಲ್ಲಿ ನಡೆದ 2026 ರ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ಸದ್ಗುರುಗಳು ಗೌರವಾನ್ವಿತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಸ್ವಾಗತಿಸಿದರು.

ರಾಜಕೀಯ

ಜನರ ಸಮಸ್ಯೆಗೆ ದನಿಯಾಗಿದ್ದ ರಾಘವ್ ಚಡ್ಡಾಗೆ ಆಪ್ ಶಾಕ್..!

ಜನರ ಸಮಸ್ಯೆಗೆ ದನಿಯಾಗಿದ್ದ ರಾಘವ್ ಚಡ್ಡಾಗೆ ಆಪ್ ಶಾಕ್..!

ಜನಪರ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಪ್ರಶ್ನಿಸುವ ಮೂಲಕ ಮೋದಿ (Modi) ಸರ್ಕಾರದ ವಿರುದ್ದ ಗುಡುಗುತ್ತಿದ್ದ ಆಮ್ ಆದ್ಮಿ ಪಕ್ಷದ (APP) ಸಂಸದ ರಾಘವ್ ಚಡ್ಡಾ (Raghav Chadha) ಅವರ ರೆಕ್ಕೆ ಕತ್ತರಿಸುವ ಕೆಲಸವನ್ನು ತನ್ನದೇ ಪಕ್ಷ

[ccc_my_favorite_select_button post_id="120655"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆ (Marriage) ಮಾಡಿಲ್ಲವೆಂದು ಜಗಳ ತಗೆದ ಮಗ (Son) ಸ್ವಂತ ತಾಯಿಯನ್ನೇ (Mother) ಹೊಡೆದು ಕೊಂದಿರುವ (Murder) ಘಟನೆ ವರದಿಯಾಗಿದೆ.

[ccc_my_favorite_select_button post_id="120643"]
ದೊಡ್ಡಬಳ್ಳಾಪುರ: ಅಪಘಾತ.. ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಆಕ್ರೋಶ..!

ದೊಡ್ಡಬಳ್ಳಾಪುರ: ಅಪಘಾತ.. ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಆಕ್ರೋಶ..!

ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ (Accident) ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ಹಿಂದೂಪುರ- ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿ ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="120640"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]