ಹಾಸನ: ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ (Krishna Bhairegowda) ಅವರು ಭೇಟಿ ನೀಡಿ, ಮಕ್ಕಳ ಜತೆ ಬಿಸಿಯೂಟ ಸವಿದರು.
ಚನ್ನಪಟ್ಟಣ ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆವಆಸ್ಪತ್ರೆಗೆ ಬಂದಿದ್ದ ರೋಗಿಗಳನ್ನು ವಿಚಾರಿಸಿದರು. ದಿನಾಂಕ ಮೀರಿದ ಔಷಧಿಗಳು ಪೂರೈಕೆ ಆಗುವುದನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ? ನೀವು ಔಷಧಿ ತೆಗೆದುಕೊಳ್ಳುವಾಗ ಅದರ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಅವಧಿ ಇರಬೇಕು. ಈ ಬಗ್ಗೆ ಆನ್‌ಲೈನ್ ವ್ಯವಸ್ಥೆ ಮಾಡಿದ್ದೀರಾ? ಏನಾದರೂ ಆ ರೀತಿ ಖರೀದಿ ಮಾಡಿದರೆ ಯಾರು ಹೊಣೆ? ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದರು.