ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಬಣ್ಣದ ಹಬ್ಬ ಹೋಳಿಯನ್ನು (Holi) ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹೋಳಿ ಹಬ್ಬದ ಅಂಗವಾಗಿ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೆಚ್ಚಾಗಿ ಉತ್ತರ ಭಾರತ ಮೂಲದ ಕುಟುಂಬಗಳಲ್ಲಿ ಹೋಳಿ ಹಬ್ಬವಾಗಿ ವಿಶೇಷ ಆಚರಣೆ, ಸಿಹಿ ಹಂಚಿಕೆ, ಬಣ್ಣದೋಕುಳಿಗಳ ಸಂಭ್ರಮ ಮನೆ ಮಾಡಿತ್ತು.
ಸ್ನೇಹಿತರಿಗೆ, ಬಂಧು ಬಾಂಧವರಿಗೆ ಬಣ್ಣಗಳನ್ನು ಎರಚಿ, ಹೋಳಿ ಸಂಭ್ರಮಾಚರಣೆ ಮಾಡಿದರು.
ಮನೆಗಳಲ್ಲಿ ವಿವಿಧ ಆಚರಣೆ, ದೇವತಾ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.