ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಚಿಕ್ಕಮಧುರೆ (Chikkamadhure) ಶ್ರೀ ಶನಿಮಹಾತ್ಮ ಸ್ವಾಮಿಯ 71ನೇ ಬ್ರಹ್ಮರಥೋತ್ಸವದ ಅಂಗವಾಗಿ ನಿನ್ನೆ ರಾತ್ರಿ (ಮಾ.04) ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಮಧುರೆ ಅಮಾನಿ ಕೆರೆಯಲ್ಲಿ ಚನ್ನಾದೇವಿ ಅಗ್ರಹಾರ ಹಾಗೂ ಗಾರಡಿಗರಪಾಳ್ಯ ಗ್ರಾಮಸ್ಥರಿಂದ ಸಂಜೆ 4:00ಯಿಂದ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ವಿಶೇಷ ಅಲಂಕಾರ, ಪೂಜೆ ಸಲ್ಲಿಸಿ, ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು.