ದೊಡ್ಡಬಳ್ಳಾಪುರ: ಮೊನ್ನೆಯಷ್ಟೇ ಉದ್ಘಾಟನೆಯಾಗಿದ್ದ ರೈಲ್ವೇ ನಿಲ್ದಾಣದ ಸಿಗ್ನಲ್ ಬಳಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident) ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ದೊಡ್ಡಬಳ್ಳಾಪುರ ಕಡೆಯಿಂದ ತೆರಳುತ್ತಿದ್ದ ಕಾರು ಮತ್ತು ಬಾಶೆಟ್ಟಿಹಳ್ಳಿ ಕಡೆಯಿಂದ ಬಂದು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಬೈಕ್ ಸವಾರನ ಕಾಲುಗಳಿಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಪಘಾತ ವರದಿಯಾಗಿದ್ದು, ಗಾಯಗಳುವಿನ ಮಾಹಿತಿ ತಿಳಿದು ಬಂದಿಲ್ಲ.