ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತವಾಗಿದ್ದು, ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ( Accident) ಜಕ್ಕೇನಹಳ್ಳಿ- ಕಲ್ಲುಕುಂಟೆ ನಡುವಿನ ಉಜ್ಜನಿ ಕ್ರಾಸ್ ದೇವಾಲಯದ ಬಳಿ ಸಂಭವಿಸಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿಗೆ ರವಾನೆ ಮಾಡಲಾಗುತ್ತಿರುವ ಬೈಕ್ ಸವಾರನನ್ನು ಗುಂಡಪ್ಪನಾಯಕನಹಳ್ಳಿ ನಿವಾಸಿ ಭರತ್ ಎನ್ನಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ಮಿತಿ ಮೀರಿದ್ದು, ಟಿಪ್ಪರ್ ಲಾರಿ, ಟ್ರಾಕ್ಟರ್ ಗಳ ಬೇಕಾಬಿಟ್ಟಿ ಓಡಾಟ ಮಿತಿ ಮೀರಿದ್ದು, ಸಾರ್ವಜನಿಕರು ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ಇದೆ.
ಆದರೆ ಹೊಸಹಳ್ಳಿ ಠಾಣೆಯ ಪೊಲೀಸರು ಅವರ ವ್ಯಾಪ್ತಿಯಲ್ಲಿನ ಗುಂಡಿ ಬಿದ್ದ ರಸ್ತೆಯಲ್ಲಿ ಎದ್ದು, ಬಿದ್ದು ಬರುವ ವಾಹನಗಳನ್ನು ತಡೆದು, ಹೆಲ್ಮೆಟ್ ಹಾಕಿಲ್ಲ, ಸೀಟ್ ಬೆಲ್ಟ್ ಹಾಕಿಲ್ಲ ಎಂದು ವಾಹನ ಸವಾರರ ದಂಡ ವಿಧಿಸಲು ಮಾತ್ರ ಸೀಮಿತವಾಗಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.