ದೊಡ್ಡಬಳ್ಳಾಪುರ: 2026-27 ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ, 16ನೇ ವಯಸ್ಸಿನೊಳಗಿನ ಮಕ್ಕಳಿಗೆ ಮೊಬೈಲ್ (Mobile) ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡುವುದಾಗಿ ಘೋಷಿಸಿದೆ.
ಸರ್ಕಾರದ ಈ ಆದೇಶವನ್ನು ದೊಡ್ಡಬಳ್ಳಾಪುರದ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಸ್ಕೂಲ್ (MSV Public School) ಸ್ವಾಗತಿಸಿದೆ.
ಈ ಕುರಿತಂತೆ ಎಂಎಸ್‌ವಿ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಅವರು ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೈಗೆ ಮೊಬೈಲ್ ಸಿಕ್ಕಿ ಮಕ್ಕಳು ಹಾಳಾದವು ಎಂಬುದು ಪೋಷಕರಿಂದ ಹಿಡಿದು ಎಲ್ಲರ ಗೊಣಗಾಟ. ಆದರೆ ಅದನ್ನು ಮಕ್ಕಳ ಕೈಗೆ ಸಿಗದಂತೆ ಮಾಡುವುದರಲ್ಲಿ ಪೋಷಕರೇ ಯಶಸ್ವಿಯಾಗಿಲ್ಲ ಎಂದು ಬೇಸತ
ವರ್ಷ ತುಂಬುವ ಮೊದಲೇ ಹಸುಗೂಸಿನ ಕೈಗೆ ಮೊಬೈಲ್ ಕೊಡುವ ತಪ್ಪನ್ನು ಹೆತ್ತವರೇ ಮಾಡುತ್ತಿದ್ದಾರೆ. ಮಗುವನ್ನು ರಮಿಸಲು ಮೊಬೈಲ್ ಬಳಕೆ ಪೋಷಕರ ಪಾಲಿಗೆ ಸುಲಭದ ಸಾಧನವಾಗಿ ಹೋಗಿರುವುದು ವಾಸ್ತವ.
ಈ ನಿಟ್ಟಿನಲ್ಲಿ ಸರ್ಕಾರದ ಆದೇಶ ಸ್ವಾಗತಾರ್ಹವಾಗಿದ್ದು, ಮಕ್ಕಳ ಜೀವನ ರೂಪಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಕಾರ್ಯರೂಪಕ್ಕೆ ತಂದು, ಮಕ್ಕಳನ್ನು ಮೊಬೈಲ್ ವ್ಯಾಮೋಹದಿಂದ ದೂರವಿರಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವು ಮಾಡಿದ್ದಾರೆ.