ನವದೆಹಲಿ: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಬಿಸಿ ಭಾರತಕ್ಕೆ ತಟ್ಟಲ್ಲ, ದಾಸ್ತಾನು ಇದೆ ಹಾಗೇ, ಹೀಗೆ ಎನ್ನುತ್ತಲೇ ದೇಶಾದ್ಯಂತ ಶನಿವಾರದಿಂದಲೇ ಸದ್ದಿಲ್ಲದೆ ಗೃಹಬಳಕೆಯ ( LPG ) ಸಿಲಿಂಡರ್ ಬೆಲೆ 60 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
The price of a 19 kg commercial LPG gas cylinder has also been increased by Rs 115, effective from today, 7 March. In Delhi, a 19 kg commercial LPG cylinder will now cost Rs 1883, and in Mumbai it will cost Rs 1835: Sources pic.twitter.com/C1JfiOHtai
— ANI (@ANI) March 6, 2026
ದರ ಪರಿಷ್ಕರಣೆಯಿಂದ LPG ಸಿಲಿಂಡರ್ ಬೆಲೆ ದೆಹಲಿಯಲ್ಲಿ 853 ರೂಪಾಯಿಯಿಂದ 913 ರೂಪಾಯಿಗೆ ಏರಿದೆ. ಮುಂಬೈನಲ್ಲಿ LPG ಸಿಲಿಂಡರ್ ದರ 852.50 ರೂಪಾಯಿಯಿಂದ 912.5 ರೂಪಾಯಿಗೆ ಹೆಚ್ಚಿದೆ. ಕೊಲ್ಕತ್ತಾದಲ್ಲಿ 879 ರೂಪಾಯಿಯಿಂದ 930ಕ್ಕೆ ಹಾಗೂ ಚೆನ್ನೈನಲ್ಲಿ 868.50 ರೂಪಾಯಿಯಿಂದ 928.50 ರೂಪಾಯಿಗೆ ಏರಿಕೆಯಾಗಿದೆ.
ವಾಣಿಜ್ಯ ಬಳಕೆಯ LPG ಸಿಲಿಂಡರ್ ದರ 115 ರೂಪಾಯಿ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ದೆಹಲಿಯಲ್ಲಿ 1883 ರೂಪಾಯಿ, ಮುಂಬೈನಲ್ಲಿ 1835, ಕೊಲ್ಕತ್ತಾದಲ್ಲಿ 1990 ಹಾಗೂ ಚೆನ್ನೈನಲ್ಲಿ 2043.5 ರೂಪಾಯಿಗೆ ಹೆಚ್ಚಿದೆ.
ಈ ದರ ಏರಿಕೆಯಿಂದ ಗೃಹಬಳಕೆ ಗ್ರಾಹಕರು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂಬ ಆತಂಕ ಎದುರಾಗಿದೆ. (ಸಾಮಾಜಿಕ ಜಾಲತಾಣದಲ್ಲಿನ ವೈರಲ್ ಚಿತ್ರ ಬಳಸಲಾಗಿದೆ)