ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಶಾಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು (Yoga competition) ಆಯೋಜಿಸಲಾಗಿತ್ತು.
ಶಾಲಾ ಸಂಸ್ಥಾಪಕ ಎ. ಸುಬ್ರಮಣ್ಯರವರ ಅಧ್ಯಕ್ಷತೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿವಿಧ ತರಗತಿಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಯೋಗ ತರಬೇತುದಾರರಾದ ಕವಿತಾರಾಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯೋಗಾಸನವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಲು ಪ್ರೇರೇಪಿಸಿದರು.

ಆಯ್ದ ವಯೋಮಾನದ ಗುಂಪುಗಳಲ್ಲಿ ನಡೆಸಿದ ಈ ಸ್ಪರ್ಧೆಯಲ್ಲಿ ಶಾಲೆಯ ಸುಮಾರು 75 ಮಕ್ಕಳು ಭಾಗವಹಿಸಿದ್ದರು.

ವಿವಿಧ ಆಸನಗಳನ್ನು ಮಕ್ಕಳು ಪ್ರದರ್ಶಿಸಿದರು.

ಕಡ್ಡಾಯ ಯೋಗಾಸನಗಳು (Compulsory Asanas), ಮತ್ತು ಐಚ್ಛಿಕ ಯೋಗಾಸನಗಳು (Optional Asanas) ಸ್ಪರ್ಧೆಯ ಮುಖ್ಯ ಭಾಗವಾಗಿದ್ದವು.

ಶಾಲೆಯ ಉಪಾಧ್ಯಕ್ಷ ಸ್ವರೂಪ್ ಎಸ್.,
ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಹಾಗೂ ಶಿಕ್ಷಕವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
