ಚೆನೈ: ಭಾರತದ (India) ಕುರಿತು ಅಮೇರಿಕಾ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾಗೂ ಅವರ ಸಚಿವರ ಬೇಕಾಬಿಟ್ಟಿ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra modi) ನೇತೃತ್ವದ ಸರ್ಕಾರ ತಿರುಗೇಟು ನೀಡದೆ ಇರುವುದು ದೇಶವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಬಹುಭಾಷಾ ನಟ, ಸಂಸದ ಕಮಲಹಾಸನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಎಚ್ಚರಿಕೆ ದಾಟಿಯ ‘ಎಕ್ಸ್’ ಸಂದೇಶ ರವಾನಿಸಿದ್ದಾರೆ.
ಹೌದು ಮೈ ಫ್ರೆಂಡ್, ಫ್ರೆಂಡ್ ಆಫ್ ಇಂಡಿಯಾ ಎಂದು ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಚುನಾವಣೆ ವೇಳೆ ಪ್ರಚಾರ ಮಾಡಿದ ಬಳಿಕ ಅಧಿಕಾರಕ್ಕೆ ಬಂದ ಟ್ರಂಪ್ ಭಾರತದ ಕುರಿತು ವಿಷ ಕಾರುತ್ತಲೇ ಇದ್ದಾರೆ.
ಪಾಕಿಸ್ತಾನ- ಭಾರತ ನಡುವೆ ಆಪರೇಷನ್ ಸಿಂಧೂರ ಕದನ ವಿರಾಮಕ್ಕೆ ಕಾರಣ ನಾನೇ ಎನ್ನುವುದು, ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನ ಖರೀದಿ ಮಾಡಿದಕ್ಕೆ ಶೇ.50 ತೆರಿಗೆ, ಬಳಿಕ ಭಾರತದ ಕುರಿತು ಬೇಕಾಬಿಟ್ಟಿ ಮಾತುಗಳು, ಇರಾನ್ ಯುದ್ಧದ ವೇಳೆ ರಷ್ಯಾ ದಿಂದ ಪೆಟ್ರೋಲಿಯಂ ಉತ್ಪನ್ನ ಖರೀದಿಸಲು ಅನುಮತಿ ನೀಡಲು ಅಮೇರಿಕಾ ಯಾರು..? ಎಂದು ಭಾರತೀಯರ ತಾಳ್ಮೆ ಕೆಡಿಸಿದೆ. ಆದರೆ ಮೋದಿ ಸರ್ಕಾರದ ಮೌನ ಹಲವು ಅಭಿಮಾನಗಳಿಗೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಬಹುಭಾಷಾ ನಟ, ಸಂಸದ ಕಮಲಹಾಸನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಎಚ್ಚರಿಕೆ ದಾಟಿಯ ‘ಎಕ್ಸ್’ ಸಂದೇಶ ರವಾನಿಸಿದ್ದಾರೆ.
To
— Kamal Haasan (@ikamalhaasan) March 7, 2026
The President of the United States of America @POTUS
Dear Mr. President,
We, the people of India, belong to a free and sovereign nation. We no longer take orders from distant foreign shores.
Please mind your own business to the best of your abilities.
Mutual respect…
‘ಡಿಯರ್ ಮಿ. ಪ್ರೆಸಿಡೆಂಟ್, ಭಾರತ ದೇಶದ ಪ್ರಜೆಗಳಾದ ನಾವುಗಳು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರಕ್ಕೆ ಸೇರಿದವರಾಗಿದ್ದೇವೆ. ಬೇರೆ ದೇಶಗಳಿಂದ ಆದೇಶ ಪಡೆದುಕೊಳ್ಳುವ ದಿನಗಳು ಈಗಾಗಲೇ ಮುಗಿದು ಹೋಗಿದೆ.
ದಯಮಾಡಿ ನೀವು “ನಿಮ್ಮ ಕೆಲಸ ನೀವು ನೋಡಿಕೊಳ್ಳಿ”, ಇತರರ ವಿಷಯದಲ್ಲಿ ಮೂಗು ತೂರಿಸಬೇಡಿ (Please mind your own business). ಜಾಗತಿಕ ಶಾಂತಿ ಕಾಯ್ದುಕೊಳ್ಳಬೇಕಾದರೆ ಸಾರ್ವಭೌಮ ದೇಶಗಳು ಕ್ರಮ. ನಾವು ನಿಮ್ಮ ದೇಶಕ್ಕೂ, ಅಲ್ಲಿನ ಜನರಿಗೂ ಶಾಂತಿ-ಉತ್ತಮ ಭವಿಷ್ಯವಿರಲಿ ಎಂದು ಹಾರೈಸುತ್ತೇವೆ’ ಎಂದು ‘ಎಕ್ಸ್ ಸಂದೇಶದಲ್ಲಿ ಬರೆದಿದ್ದಾರೆ.
ಕಡೆಗೆ, ‘ಕಮಲಹಾಸನ್, ಒಬ್ಬ ಹೆಮ್ಮೆಯ ಭಾರತೀಯ ಪ್ರಜೆ, ಮಕ್ಕಳ್ ನೀದಿ ಮೈಯಮ್ ಪಕ್ಷದ ಸಂಸ್ಥಾಪಕ’ ಎಂದು ಬರೆದು ಸಂದೇಶ ಕೊನೆಗೊಳಿಸಿದ್ದಾರೆ.
ಈ ‘ಎಕ್ಸ್’ ಸಂದೇಶವನ್ನು 47 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿ ಮುಂದು ವರಿಸಬಹುದು. ಅದಕ್ಕಾಗಿ ಭಾರತದ ತೈಲ ಸಂಸ್ಕರಣಾ ಕಂಪನಿಗಳಿಗೆ 30 ದಿನಗಳ ‘ತಾತ್ಕಾಲಿಕ’ ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕದ ವಿತ್ತ ಸಚಿವ ಬೆಸ್ಸೆಂಟ್ ಶನಿವಾರ ಘೋಷಿಸಿದ್ದರು. ಅಮೆರಿಕದ ಸಚಿವರ ಈ ನಡೆಯಿಂದ ಆಕ್ರೋಶಗೊಂಡ ಸಂಸದ ಕಮಲಹಾಸನ್, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.