ದೊಡ್ಡಬಳ್ಳಾಪುರ: ಮುಂದೆ ಬಿದ್ದ ಬೈಕ್ ಸವಾರರ ಜೀವ ಉಳಿಸಲು ಮುಂದಾದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಬೆಸ್ಕಾಂ ಕೇಂದ್ರಕ್ಕೆ ಡಿಕ್ಕಿ ಹೊಡೆದಿದ್ದು (Accident), ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾಣದ ಅನಾಹುತವೇ ತಪ್ಪಿದೆ.
ನಗರದ ನಗರದ ಪ್ರವಾಸಿ ಮಂದಿರದ ಕಡೆಯಿಂದ ಡಿ.ಕ್ರಾಸ್ ಕಡೆ ಟೆಂಪೋ ತೆರಳುವ ವೇಳೆ ಬೈಕ್ ಹಿಂದಿಕ್ಕಲು ಮುಂದಾಗಿದ್ದು, ಈ ವೇಳೆ ಬೈಕ್ಗೆ ಟೆಂಪೋ ತಗುಲಿದೆ. ಪರಿಣಾಮ ಬೈಕ್ ಸವಾರರು ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಹೆಚ್ಚೆತ್ತ ಟೆಂಪೋ ಚಾಲಕ ಬೈಕ್ ಸವಾರರ ಮೇಲೆ ಟೆಂಪೋ ಹರಿಯುವುದನ್ನು ತಪ್ಪಿಸಲು ಟೆಂಪೋವನ್ನು ಎಡಕ್ಕೆ ತಿರುಗಿಸಿದ್ದಾರೆ.
ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೋ ಪುಟ್ ಬಾತ್ ಮೇಲೆ ಸಾಗಿ ಬೆಸ್ಕಾಂ ವಿದ್ಯುತ್ ಪ್ರಸರಣ ಕೇಂದ್ರದ ತಂತಿ ಬೇಲಿಗೆ ಗುದ್ದಿದೆ.
ನೆಲಕ್ಕೆ ಬಿದ್ದ ಬೈಕ್ ಸವಾರನೋರ್ವನ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಒಂದು ವೇಳೆ ಟೆಂಪೋ ತಂತಿ ಬೇಲಿ ನುಗ್ಗಿ ಟ್ರಾನ್ಸ್ ಫಾರ್ಮರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದಾರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.