ದೊಡ್ಡಬಳ್ಳಾಪುರ; ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಕಾಸ ಶಿಕ್ಷಣ ಕೇಂದ್ರವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ “ಸಿ.ವಿ. ರಾಮನ್ ಪುಸ್ತಕ ಓದಿ, ಬಹುಮಾನ ಗೆಲ್ಲಿ” ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ವಿವಿಧ ಶಾಲೆಗಳಿಂದ ಒಟ್ಟು 713 ವಿದ್ಯಾರ್ಥಿಗಳು ಭಾಗವಹಿಸಿದ್ದು, 94 ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಗಳಲ್ಲಿ 57 ಪ್ರಶಸ್ತಿಗಳನ್ನು ಎಂಎಸ್‌ವಿ ಶಾಲೆಯ ವಿದ್ಯಾರ್ಥಿಗಳು ಪಡೆದಿದ್ದಾರೆ.
ಎಂಎಸ್‌ವಿ ಶಾಲೆಯ ಮಕ್ಕಳು ಪ್ರಾಥಮಿಕ ವಿಭಾಗದಲ್ಲಿ 31 ಪ್ರಶಸ್ತಿಗಳು, ಪ್ರೌಢಶಾಲಾ ವಿಭಾಗದಲ್ಲಿ 26 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಮಾಧಾನಕರ ಬಹುಮಾನಗಳನ್ನು ಪ್ರಾಥಮಿಕ ವಿಭಾಗದಲ್ಲಿ 26 ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪಡೆದಿದ್ದಾರೆ.
ಪ್ರಾಥಮಿಕ ವಿಭಾಗ
ಪ್ರಥಮ ಬಹುಮಾನ : ಮಹಾಲಕ್ಷ್ಮಿ 7 ನೇ ತರಗತಿ
ದ್ವಿತೀಯ ಬಹುಮಾನ: ದೀಕ್ಷಾ ಗೌಡ 7 ನೇ ತರಗತಿ
ದ್ವಿತೀಯ ಬಹುಮಾನ: ಭವಿತ್ ಗೌಡ 7ನೇ ತರಗತಿ
ತೃತೀಯ ಬಹುಮಾನ: ಶಿವಶರಣ ಎ. ಎಂ. 6ನೇ ತರಗತಿ
ತೃತೀಯ ಬಹುಮಾನ: ಐಷಾನಿ.ಜೆ 7 ನೇ ತರಗತಿ
ಪ್ರೌಢಶಾಲಾ ವಿಭಾಗ
ಪ್ರಥಮ ಬಹುಮಾನ: ಪ್ರತ್ಯೂಷ.ವಿ. 9ನೇ ತರಗತಿ
ಪ್ರಥಮ ಬಹುಮಾನ: ದೀಕ್ಷಿತ ಎಂ 9 ನೇ ತರಗತಿ
ದ್ವಿತೀಯ ಬಹುಮಾನ: ಹನ್ಸಿಕಾ ಸಿ.ಎಂ 9ನೇ ತರಗತಿ
ತೃತೀಯ ಬಹುಮಾನ: ವರ್ಷ. ಕೆ. ವಿ. 9 ನೇ ತರಗತಿ
ತೃತೀಯ ಬಹುಮಾನ: ದೇವಿಕಾ. ಎಸ್ 9ನೇ. ತರಗತಿ
ಶಾಲೆಯ ಮಕ್ಕಳ ಈ ಸಾಧನೆಗೆ ಕಾರಣರಾದ ಕನ್ನಡ ಶಿಕ್ಷಕ ರಮೇಶ್ ಪೂಜಾ ಅವರನ್ನು ಶಾಲೆ ಸಂಸ್ಥಾಪಕ ಸುಬ್ರಮಣ್ಯ ಎ ಹಾಗೂ ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಅವರು ಅಭಿನಂದಿಸಿದ್ದಾರೆ.