ತಿರುವನಂತಪುರಂ: 2025ರ ಪ್ರಯಾಗ್ರಾಜ್ ಕುಂಭಮೇಳದಲ್ಲಿ ತನ್ನ ಮಿನುಗುವ ನೀಲಿಗಣ್ಣಿನ ಮೂಲಕ ಎಲ್ಲರ ಗಮನಸೆಳೆದಿದ್ದ ಮೊನಾಲಿಸಾ ಭೋಸಲೆ (Monalisa Bhosle), ಮಾ.11ರಂದು ಕೇರಳದಲ್ಲಿ ಮುಸ್ಲಿಮ್ ಸಮುದಾಯದ ಯುವಕನನ್ನು ಹಿಂದೂ ಪದ್ದತಿಯಂತೆ ಮದುವೆಯಾಗಿದ್ದಾರೆ.
ಹೆತ್ತವರ ವಿರೋಧದ ನಡುವೆಯೇ ಮಹಾರಾಷ್ಟ್ರದ ಫರ್ಮಾನ್ ಖಾನ್‌ರನ್ನು, ತಿರುವನಂತಪುರಂನ ಅರುಮಾನೂರು ನಾಯನಾರ್ ದೇವಾಲಯದಲ್ಲಿ ವರಿಸಿದ್ದಾರೆ.
ಕೇರಳದ ಸಚಿವ ಶಿವನ್ ಕುಟ್ಟಿ, ಸಂಸದ ಎ.ಎಂ. ರಹೀಮ್ ಈ ಮದುವೆಗೆ ಸಾಕ್ಷಿಯಾದರು.
ಪ್ರಯಾಗ್‌ರಾಜ್‌ನಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಿಕೊಂಡಿದ್ದ ಮೊನಾಲಿಸಾರ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಮಧ್ಯ ಪ್ರದೇಶದ ಇಂದೋರ್‌ನ ಈ ಸುಂದರಿ ಮತ್ತು ಫರ್ಮಾನ್‌ಗೂ 6 ತಿಂಗಳಿನಿಂದ ಫೇಸ್ ಬುಕ್ ಮೂಲಕ ಪರಿಚಯವಾಗಿತ್ತು ಎಂದು ವರದಿಯಾಗಿದೆ.
Viral #KumbhMela fame #Monalisa Bhosle has reportedly married her boyfriend Farman Khan at a temple in Thiruvananthapuram. The couple has sought protection from #Kerala Police amid family opposition to their relationship.
— Ashish (@KP_Aashish) March 11, 2026
Monalisa from Indore, Madhya Pradesh, shot to fame after a… pic.twitter.com/P41vBSCLZs
ಸದ್ಯ ಕೇರಳದ ಪೂವರ್‌ನಲ್ಲಿ ಮಲಯಾಳಂ ಸಿನಿಮಾ ನಾಗಮ್ಮ ಶೂಟಿಂಗ್‌ನಲ್ಲಿ ಮೊನಾಲಿಸಾ ಬ್ಯುಸಿ ಯಾಗಿದ್ದಾರೆ.
ಮಗಳು ಮೊನಾಲಿಸಾ ಇರುವ ಜಾಗವನ್ನು ಪತ್ತೆ ಮಾಡಿದ ತಂದೆ ಜೈಸಿಂಗ್ ಭೋಸಲೆ ಮಗಳನ್ನು ವಾಪಸ್ ಒಯ್ಯಲು ಯತ್ನಿಸಿದ್ದಾರೆ. ಆಗ ಫರ್ಮಾನ್ ಮತ್ತು ಮೊನಾಲಿಸಾ ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಆಕೆಗೆ 18 ವರ್ಷವಾಗಿರುವುದರಿಂದ ಮದುವೆಯನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಮದುವೆಗೆ ಕೇರಳದ ಪ್ರಮುಖ ರಾಜಕಾರಣಿಗಳು ಬೆಂಬಲವಾಗಿ ನಿಂತಿದ್ದಾರೆ. ಮಾತ್ರವಲ್ಲ ಇದೇ ನಿಜವಾದ ಕೇರಳ ಸ್ಟೋರಿ ಎಂದಿದ್ದಾರೆ. ಮೊನಾಲಿಸಾ ಈಗ ಬಾಲಿವುಡ್‌ಗೂ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದಾರೆ.
ಆದರೆ ಇದು ಲವ್ ಜಿಹಾದ್ ಎಂದು ಹಿಂದೂಪರರಿಂದ ಭಾರೀ ವಿವಾದ ಎದ್ದಿದೆ.