ದೊಡ್ಡಬಳ್ಳಾಪುರ: ಸಾವಿರ ವರ್ಷಗಳ ಇತಿಹಾಸವಿರುವ ಪವಿತ್ರ ಸೋಮನಾಥ ಜ್ಯೋತಿರ್ಲಿಂಗ (Somnath Jyotirlinga Darshan) ಮಾರ್ಚ್ 14ರಂದು ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದು, ಈ ಜ್ಯೋತಿರ್ಲಿಂಗ ದರ್ಶನಕ್ಕೆ ನಗರದ ಸೋಮೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ನ ಸುನಿಲ್ ವೆಂಕಟೇಶ್ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ನ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೊಘಲರಿಂದ ಹಲ್ಲೆಗೊಳಗಾಗಿ ಛಿದ್ರವಾಗಿದ್ದ ಸೋಮನಾಥ ಜ್ಯೋತಿರ್ಲಿಂಗವು ಸೀತಾ ರಾಮ ಶಾಸ್ತ್ರೀ ಯವರ ಮುಖೇನಾ 2025 ರಲ್ಲಿ ಮರಳಿ ಆರ್ಟ್ ಆಫ್ ಲಿವಿಂಗ್ನ ರವಿ ಶಂಕರ್ ಗುರೂಜಿ ಕೈ ಸೇರಿದ್ದು, ದೇಶದಾದ್ಯಂತ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂಬ ಗುರೂಜಿಯವರ ಮಹತ್ಸಂಕಲ್ಪದಿಂದ 1000 ವರ್ಷಗಳ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನವನ್ನು ದೊಡ್ಡಬಳ್ಳಾಪುರ ಜನತೆಗೆ ಮಾರ್ಚ್ 14 ರಂದು ಬೆಳಿಗ್ಗೆ 8 ರಿಂದ 11ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
100 ದಂಪತಿಗಳಿಂದ ವಿಶೇಷ ರುದ್ರಾರ್ಚನೆ
ಮಾರ್ಚ್ 14 ರಂದು ವಿಶೇಷ ರುದ್ರಾಭಿಷೇಕ ಆಯೋಜನೆ ಮಾಡಿದ್ದು, ಈ ಪೂಜಾ ಕಾರ್ಯಕ್ರಮದಲ್ಲಿ 100 ದಂಪತಿಗಳಿಗೆ ಅವಕಾಶ ಕಲ್ಪಿಸಿದ್ದು ಮುಂಗಡ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತದಿಗಳಿಗೆ ದರ್ಶನಕ್ಕೆ ಸೂಕ್ತ ಕಲ್ಪಿಸಿದ್ದು ಜಿಲ್ಲೆ ಹಾಗೂ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಈ ವೇಳೆ ಹಿರಿಯ ಶಿಕ್ಷಕ ವೆಂಕಟ ರಾಮು, ಸ್ವಯಂ ಸೇವಕರಾದ ಮಂಜುನಾಥ್, ಶಿಲ್ಪಾ
ಮೊದಲಾದವರು ಹಾಜರಿದ್ದರು.