ದೊಡ್ಡಬಳ್ಳಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (Journalists’ Voice), ಸಂಘಟನೆಯ ನೆಲಮಂಗಲದಲ್ಲಿ ನಡೆಯಲಿರುವ 4ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ದೊಡ್ಡಬಳ್ಳಾಪುರದಲ್ಲಿ ಇಂದು ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ನೂತನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಹೊಸಕೋಟೆಯ ಎಂ.ಚೌಡೆಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೆಲಮಂಗಲದ ಮಹೇಶ್, ಗೌರವಾಧ್ಯಕ್ಷರಾಗಿ ದೊಡ್ಡಬಳ್ಳಾಪುರದ ಎಂ.ಎಲ್. ಆನಂದ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎಂ.ದೇವರಾಜ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಜನಪರ ಮಂಜು, ಉಪಾಧ್ಯಕ್ಷ ಚೌಡರಾಜ್, ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಕೇಬಲ್ ರಾಮಚಂದ್ರ, ಸಹ ಕಾರ್ಯದರ್ಶಿ ಹರಿಕುಮಾರ್, ನಾಲ್ಕು ತಾಲೂಕಿನ ಅಧ್ಯಕ್ಷರುಗಳು ಉಪಸ್ಥಿತರಿದ್ದರು.