ದೊಡ್ಡಬಳ್ಳಾಪುರ: ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುವ ಹೂಮನ್ ಪ್ಯಾಪಿಲೋಮವೈರಸ್ (HPV vaccin ) ಲಸಿಕಾ ಅಭಿಯಾನಕ್ಕೆ ಇಂದು ತಾಲೂಕಿನ ಆರೂಢಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಲಾಯಿತು.

ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ಪ್ರಕಾರಗಳಾದ 16 ಮತ್ತು 18, ಹಾಗೂ 6 ಮತ್ತು 11 ರ ವಿರುದ್ಧ ರಕ್ಷಣೆ ನೀಡುವ ‘ಗಾರ್ಡಾಸಿಲ್ 4’ ಲಸಿಕೆಯನ್ನು ರಾಷ್ಟ್ರವ್ಯಾಪಿ ನಡೆಯುವ ಈ ಅಭಿಯಾನದ ಸಮಯದಲ್ಲಿ ಒಂದೇ ಡೋಸ್‌ನಲ್ಲಿ 14 ವರ್ಷದ ಬಾಲಕಿಯರಿಗೆ ನೀಡಲಾಗುತ್ತಿದೆ.
ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವಾಗಿದ್ದು, ಬಾಲಕಿಯರಿಗೆ ಲಸಿಕೆ ಹಾಕುವ ಮೊದಲು ಪೋಷಕರು ಅಥವಾ ಪಾಲಕರಿಂದ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ.
ಖಾಸಗಿಯಾಗಿ ಪಡೆಯುವುದಾದರ ಈ ಲಸಿಕೆ ಸಾವಿರಾರು ವೆಚ್ಚಾಗುತ್ತದೆ. ಇದನ್ನು ಮನಗಂಡಿರುವ ಸರ್ಕಾರ 14 ರಿಂದ 15 ವರ್ಷದ ಯುವತಿಯರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಈ ವೇಳೆ ಪ್ರಾಥಮಿಕ ಆರೋಗ್ಯ ರಕ್ಷಣಾ ಅಧಿಕಾರಿ ರಾಜಮ್ಮ, ಪಾರ್ಮಸಿಸ್ಟ್ ಸೌಮ್ಯ ಇದ್ದರು.