ಬೆಂಗಳೂರು: ಈ ಬೇಸಿಗೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕರ್ನಾಟಕದ (Karnataka) ಹಳ್ಳಿಗಳು ಮಿನಿ ಕಾಶ್ಮೀರವಾಗಿ (Mini Kashmir) ಮಾರ್ಪಟ್ಟಿವೆ.

ಧಾರವಾಡ ಜಿಲ್ಲೆಯ ಕಲ್ಘಟಗಿ ಸುತ್ತಮುತ್ತಲಿನ ಮಚಾಪುರ ಮತ್ತು ಹತ್ತಿರದ ಹಳ್ಳಿಗಳಲ್ಲಿ ಮಂಗಳವಾರ ತೀವ್ರ ಆಲಿಕಲ್ಲು ಮಳೆಯಾಗಿದೆ.
When a #Karnataka village turned into mini-#Kashmir this summer!
— TOI Bengaluru (@TOIBengaluru) March 17, 2026
A severe #hailstorm struck Machapur & nearby villages around Kalghatgi in Dharwad district 👇 on Tuesday,
Cloudy weather & drizzle predicted in #Bengaluru for next 2 days@timesofindia pic.twitter.com/YnFdImVTlR
ಮುಂದಿನ 2 ದಿನಗಳವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಮುನ್ಸೂಚನೆ ಇದೆ.
ರಾಜ್ಯದ ಹಲವೆಡೆ ಮಂಗಳವಾರ ಮಳೆ ಸಿಂಚನ ಆಗಿದ್ದು, ಬಿಸಿಲಿನ ಪ್ರಖರತೆಗೆ ಕಾದ ಕಬ್ಬಿಣದಂತಾಗಿದ್ದ ಭೂಮಿ ತಂಪಾಗಿದೆ. ಬೆಂಗಳೂರು, ವಿಜಯ ನಗರ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಧಾರವಾಡ, ಚಾಮರಾಜ ನಗರ, ರಾಯಚೂರು ಜಿಲ್ಲೆಯಲ್ಲಿ ಆಲಿ ಕಲ್ಲು ಮಳೆ ಸುರಿದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ಪ್ರದೇಶ ದಲ್ಲಿ ಭಾರೀ ಆಲಿಕಲ್ಲು ಸಹಿತ ಮಳೆ ಸುರಿ ದಿದೆ. ಮಧ್ಯಾಹ್ನ 3ರಿಂದ ಒಂದು ತಾಸಿಗೂ ಮಳೆ ಸುರಿಯಿತು. ಬೆಟ್ಟದೂರಿನಲ್ಲಿ ರಸ್ತೆ ಗಳು, ಮನೆ ಮುಂದೆ, ಮೈದಾನ ಎಲ್ಲ ಕಡೆ ಸಿ ಆಲಿಕಲ್ಲುಗಳು ಬಿದ್ದಿದ್ದವು.
ಅಣ್ಣಿಗೇರಿ ತಾಲೂಕು ಕೇಂದ್ರದಲ್ಲಿ ಮಳೆಯಾಗಿದ್ದು, ಆಲಿಕಲ್ಲುಗಳು ಬಿದ್ದಿವೆ. ನವಲಗುಂದ ತಾಲೂಕು ಕೇಂದ್ರದಲ್ಲಿ ತುಂತುರು ಮಳೆ ಯಾಗಿರುವ ಬಗ್ಗೆ ವರದಿ ಯಾಗಿದೆ. ಧಾರವಾಡದಲ್ಲಿಯೂ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಟೋಲನಾಕಾ ಸಂಪೂರ್ಣ ನೀರಿನಿಂದ ಜಲಾವೃತ ಗೊಂಡಿತ್ತು. ಪ್ರಯಾಣಿಕರು ದಾಟಲು ಹರಸಾಹಸ ಪಟ್ಟ ಸನ್ನಿವೇಶ ಎದುರಾದವು.