ಚಿಕ್ಕಬಳ್ಳಾಪುರ: ಇರಾನ್ (Iran) ಮೇಲೆ ಇಸ್ರೇಲ್ (Israeli) ಹಾಗೂ ಅಮೇರಿಕಾ (America) ಬಾಂಬ್ ದಾಳಿ ಹಿನ್ನಲೆಯಲ್ಲಿ ಇಸ್ರೇಲ್, ಅಮೆರಿಕಾ ದೇಶಗಳ ಧ್ವಜಗಳನ್ನು (flags) ಚಪ್ಪಲಿಯಿಂದ ತುಳಿದು ಆಕ್ರೋಶ ವ್ಯಕ್ತಪಡಿಸುವ ಮೂಲಕ ರಂಜಾನ್ (Ramadan) ಆಚರಣೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮದಲ್ಲಿ ವರದಿಯಾಗಿದೆ.

ಅಮೇರಿಕಾದ ದಾಳಿಗೆ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ಹಿನ್ನಲೆ ಇಸ್ರೇಲ್, ಅಮೆರಿಕಾ ದೇಶಗಳ ಧ್ವಜಗಳನ್ನು ಚಪ್ಪಲಿ ಯಲ್ಲಿ ತುಳಿದು ರಂಜಾನ್ ಆಚರಣೆ ಮಾಡಲಾಗಿದೆ.
ಅಲಿಪುರದಲ್ಲಿ ಶಿಯಾ ಸಮುದಾಯದಿಂದ ಕಪ್ಪುಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಅಲ್ಲದೆ ಇಸ್ರೇಲ್, ಅಮೆರಿಕ ಧ್ವಜಗಳನ್ನು ಚಪ್ಪಲಿಗೆ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.