ದೊಡ್ಡಬಳ್ಳಾಪುರ: ಶಂಕುಸ್ಥಾಪನೆ ಕಂಡು 2 ವರ್ಷ 10 ತಿಂಗಳು ಕಳೆದರು ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದಾಗಿ ವಾಹನ ಸವಾರರು ಪದೇ ಪದೇ ಅಪಘಾತಕ್ಕೆ (Accident) ಒಳಗಾಗುತ್ತಿರುವ ಘಟನೆ ರಾಜಘಟ್ಟ ಕೆರೆ ಏರಿ ಮೇಲೆ ನಡೆಯುತ್ತಿದೆ.

ಸುಮಾರು 30 ತಿಂಗಳ ಹಿಂದೆ ಈ ರಸ್ತೆ ಕಾಮಗಾರಿಗೆ ಶಂಸುಸ್ಥಾಪನೆ ಮಾಡಲಾಗಿದ್ದು, ಪ್ರಸಿದ್ಧ ನಂದಿಬೆಟ್ಟ – ದೊಡ್ಡಬಳ್ಳಾಪುರ ಸಂಪರ್ಕ ಕಲ್ಪಿಸುವ ರಾಜಘಟ್ಟ ಕೆರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವಾಹನಗಳು ನಿಯಂತ್ರಣ ತಪ್ಪಿ ಪದೇ ಪದೇ ಅಪಘಾತಕ್ಕೆ ಒಳಗಾಗುತ್ತಿವೆ.
ಕಾಮಗಾರಿಯ ಕಾರಣ ಜಲ್ಲಿ ಕಲ್ಲುಗಳು ಹರಡಿದ್ದು, ಇದರ ಮೇಲೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ, ಕಾರಿನ ಮುಂಭಾಗ ಜಖಂಗೊಂಡಿರುವ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ನಾಳೆ ಶ್ರೀರಾಮನವಮಿ ಹಬ್ಬವಿದ್ದು, ಇಲ್ಲಿನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಸಾವಿರಾರು ದೀಪಗಳು ನಡೆಯಲ್ಲಿದ್ದು, ಈ ರಸ್ತೆ ಅವ್ಯವಸ್ಥೆ ಗ್ರಾಮಸ್ಥರಿಗೆ, ಭಕ್ತಾದಿಗಳಿಗೆ ಸಂಕಷ್ಟವನ್ನು ತಂದಿದೆ.