ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ (Ghati Subrahmanya Temple) ಗುರುವಾರವಾದ ಇಂದು ಹುಂಡಿ ಕಾಣಿಕೆ ಎಣಿಕೆ ಕಾರ್ಯ ಮಾಡಲಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಇಂದು ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ 39 ಲಕ್ಷ 49 ಸಾವಿರ 549ರೂ ಸಂಗ್ರಹವಾಗಿದೆ.
ಇದರೊಂದಿಗೆ 91 ಸಾವಿರ ಮೌಲ್ಯದ 830ಗ್ರಾಂ ಬೆಳ್ಳಿ, 47 ಸಾವಿರ ಮೌಲ್ಯದ 4 ಗ್ರಾಂ ಚಿನ್ನ ಹಾಗೂ ಸಿಂಗಪೂರ್ 10 ಡಾಲರ್ ಮೌಲ್ಯದ ಒಂದು ನೋಟನ್ನು (ಇದರ ಭಾರತೀಯ ಮೌಲ್ಯ 718 ರೂ 534 ಫೈಸೆಗಳು) ಭಕ್ತರು ಹುಂಡಿಗೆ ಅರ್ಪಿಸಿದ್ದಾರೆ.
ಇಂದು ಹುಂಡಿಯನ್ನು ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ಆಡಳಿತ ಮಂಡಲಿ ಪದಾಧಿಕಾರಿಗಳು, ಸಿಬ್ಬಂದಿ, ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.