ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಸರಸ್ವತಿ ಸಿ.ಕೆ. (Teacher Saraswati C K) ಅವರಿಗೆ ಅನುಪಮಾ ಸೇವಾ ಪ್ರಶಸ್ತಿ (Anupama Seva Award) ನೀಡಿ ಗೌರವಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸರಸ್ವತಿ ಸಿ.ಕೆ. ಅವರಿಗೆ ಅನುಪಮಾ ಸೇವಾ ಪ್ರಶಸ್ತಿ ನೀಡಲಾಗಿದೆ.
ತಮ್ಮ ಸೇವಾವಧಿಯಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ, ಅನುಪಮಾ ಸೇವಾ ಪ್ರಶಸ್ತಿಯನ್ನು ಸಹ ಶಿಕ್ಷಕಿ ಸರಸ್ವತಿ ಅವರಿಗೆ ನೀಡಿ, ಸನ್ಮಾನಿಸಿ, ಅಭಿನಂದಿಸಲಾಗಿದೆ.